ಪ್ರಕಾಶ್ ಎಲೆಕ್ಟ್ರಾನಿಕ್ಸ್‌ನಲ್ಲಿ ಅದೃಷ್ಟ ಕೂಪನ್ ಬಿಡುಗಡೆ

ಬೆಳ್ತಂಗಡಿ: ಉಜಿರೆ ಮತ್ತು ಗುರುವಾಯನಕೆರೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೆ.30 ರಂದು ಅದೃಷ್ಟ ಕೂಪನ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ವಿಜಯ ಬ್ಯಾಂಕ್ ಪ್ರಬಂಧಕರಾದ ರವಿಶಂಕರ ರವರು ಗ್ರಾಹಕರಾದ ಅಬ್ದುಲ್ ಅಜೀಜ್ ರವರಿಗೆ ಕೂಪನ್ ನೀಡುವುದರ ಮೂಲಕ ವಿಜಯೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಲಕರಾದ ಪುಷ್ಪರಾಜ ಶೆಟ್ಟಿ, ಸುಮನ ಪಿ ಶೆಟ್ಟಿ, ಪತ್ರಕರ್ತರಾದ ಚೈತ್ರೇಶ್, ಮಂಜುನಾಥ ರೈ, ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಮನೋಹರ ಕುಮಾರ್ ಉಪಸ್ಥಿತರಿದ್ದರು.
ಗುರುವಾಯನಕೆರೆ ಮತ್ತು ಉಜಿರೆ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ಎಲೆಕ್ಟ್ರಾನಿಕ್ ಐಟಂಗಳು, ಪೀಠೋಪಕರಣಗಳು ಆಕರ್ಷಕ ದರದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಲಭ್ಯವಿದೆ. ಬಡ್ಡಿರಹಿತ ಸುಲಭ ಕಂತುಗಳಲ್ಲಿ ಸ್ಥಳದಲ್ಲಿ ಸಾಲ ಸೌಲಭ್ಯ, ಬಜಾಜ್ ಫೈನಾನ್ಸ್ ಸಹಯೋಗದಲ್ಲಿ ಪಡೆಯಬಹುದು. ಸೆ.29 ರಿಂದ ನ.9 ರವರೆಗೆ ಒಂದು ಸಾವಿರ ರೂ. ಅಧಿಕ ಮೊತ್ತದ ವಸ್ತುಗಳನ್ನು ಖರೀದಿಸಿದರೆ ಲಕ್ಕಿ ಕೂಪನ್ ಪಡೆಯಬಹುದು. ಅದೃಷ್ಟ ಬಂಪರ್ ಡ್ರಾದಲ್ಲಿ ಕಾರು, ದ್ವಿಚಕ್ರ ವಾಹನ, ಟಿ.ವಿ, ವಾಷಿಂಗ್‌ಮೆಷಿನ್, ರೆಫ್ರಿಜರೇಟರ್ ಇತ್ಯಾದಿ ಬಹುಮಾನಗಳಿವೆ ಎಂದು ಪುಷ್ಪರಾಜ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದರು. ಶಾಲ್ಮಿಲಿ, ಸಮತ್ ಮತ್ತು ಸಿಬ್ಬಂದಿವರ್ಗವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.