ನ್ಯಾಷನಲ್ ಕನ್ಸ್ಯೂಮರ್ ಫೇರ್‌ನಿಂದ 2ನೇ ಬಾರಿಗೆ ಆಯೋಜನೆ… `ಪುತ್ತೂರು ಉತ್ಸವ’ ಕ್ಕೆ ಅದ್ಧೂರಿ ಚಾಲನೆ

ಆರಂಭದ ದಿನವೇ ಸೆಲ್ಫಿ ಗ್ಯಾಲರಿಗೆ ಫಿದಾ

ಪುತ್ತೂರು: ಇದೊಂದು ಮನಸೋಲ್ಲಾಸ, ಹರ್ಷೋಲ್ಲಾಸ ನೀಡುವ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಪುತ್ತೂರು ಉತ್ಸವದಿಂದಾಗಿ ಎಲ್ಲರಿಗೂ ಎಂಟರ್‌ಟೈನ್ ಮೆಂಟ್ ದೊರೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ನ್ಯಾಷನಲ್ ಕನ್ಸ್ಯೂಮರ್ ಫೇರ್ ವತಿಯಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿರುವ ಮೆಗಾ ಮನರಂಜನಾ ಮೇಳ ಹಾಗೂ ವಸ್ತುಪ್ರದರ್ಶನ ‘ಪುತ್ತೂರು ಉತ್ಸವ’ವನ್ನು ಅವರು ಸೆ.27ರಂದು ರಿಬ್ಬನ್ ಕತ್ತರಿಸಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಪುತ್ತೂರಿನ ದಸರಾಕ್ಕೆ ಈ ಬಾರಿ ಐತಿಹಾಸಿಕ ಮೆರುಗು ನೀಡಲು ಪುತ್ತೂರು ಉತ್ಸವ ಸನ್ನದ್ಧವಾಗಿದೆ. ಉಳಿದಂತೆ ನಾನಾ ಕಂಪೆನಿಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮನರಂಜನಾ ಕ್ರೀಡೆಗಳು,ಫುಡ್ ಕೋರ್ಟ್ ಒಂದೇ ಸೂರಿನಡಿ ಲಭ್ಯವಾಗಲಿದ್ದು ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದ ಅವರು ಈ ಮೇಳವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಆಡಳಿತಾಧಿಕಾರಿ ವಿಷ್ಣುಪ್ರಸಾದ್ ಸಿ., ವ್ಯವಸ್ಥಾಪಕರಾದ ಜಗದೀಶ್ ಪಿ. ರವರು ಆಗಮಿಸಿ ಶುಭಹಾರೈಸಿದರು. ಪ್ರಪುಲ್ಲಾ ವಿ ಶೆಟ್ಟಿ ಬೆಳ್ಳಿಪ್ಪಾಡಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ ಶಿವಾನಂದ, ಎ.ಪಿ.ಎಂ.ಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ಅಶ್ವಿನಿ ಹೋಟೆಲ್ ಮಾಲಕ ಕರುಣಾಕರ ರೈ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು. ನಗರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಜೀತ್ ಸ್ಟುಡಿಯೋ ಮಾಲಕ ಸುಧಾಕರ ಶೆಟ್ಟಿ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಹಿಂ.ಜಾ.ವೆ ತಾಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಬಾಲಕೃಷ್ಣ ಶೆಟ್ಟಿ ಉರಮಾಲು, ದಯಾನಂದ ಶೆಟ್ಟಿ ಉಜಿರೆಮಾರು, ತುಳು ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಮೊದಲಾದವರು ಉಪಸ್ಥಿತರಿದ್ದರು. ನ್ಯಾಷನಲ್ ಕನ್ಸ್ಯೂಮರ್ ಫೇರ್‌ನ ನಿರ್ದೇಶಕರಾದ ಗೌತಮ್ ಸ್ವಾಗತಿಸಿ, ಪುತ್ತೂರು ಉತ್ಸವದ ಆಯೋಜಕರಾದ ರಾಮ್‌ದಾಸ್ ಶೆಟ್ಟಿ ವಿಟ್ಲ ವಂದಿಸಿದರು.

ಮೆರುಗು ನೀಡಿದ ಸಿಂಗಾರಿ ಮೇಳ: ಉದ್ಘಾಟನಾ ಸಮಾರಂಭದಲ್ಲಿ ಲಕ್ಷ್ಮೀದೇವಿ ಬೆಟ್ಟದ ಬಾಲಕಲಾವಿದರ ಸಿಂಗಾರಿ ಮೇಳ ಮೆರುಗು ನೀಡಿತ್ತು. ಸಮಾರಂಭದ ಬಳಿಕವೂ ಅನೇಕ ಯುವಕರು ಸಿಂಗಾರಿ ಮೇಳದ ಚೆಂಡೆ ಬಡಿತಕ್ಕೆ ಹೆಜ್ಜೆ ಹಾಕುತ್ತಿದ್ದದ್ದು ಗಮನ ಸೆಳೆಯಿತು.

ಸೆಲ್ಫೀ ಸಂಭ್ರಮ: ಉದ್ಘಾಟನಾ ಸಮಾರಂಭದ ಪ್ರಯುಕ್ತ ಮೇಳಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿತ್ತು. ನೂರಾರು ಮಂದಿ ಆರಂಭದ ದಿನವೇ ಕುಟುಂಬಿಕರಾಗಿ ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿದ್ದ ಮಲೇಶಿಯನ್ ಟ್ವಿನ್ ಟವರ್‌ನ ರಿಪ್ಲಿಕಾ, ಸೆಲ್ಫೀ ಗ್ಯಾಲರೀ ಮುಂಭಾಗದಲ್ಲಿ ಸೆಲ್ಫಿ ತೆಗೆಯುತ್ತಾ ಸಂಭ್ರಮಿಸುತ್ತಿದ್ದದ್ದು ಪುತ್ತೂರು ಜಾತ್ರೆಯನ್ನು ನೆನಪಿಸುವಂತಿತ್ತು. ರೋಬೊಟಿಕ್ ಅನಿಮಲ್ ನಲ್ಲಿ ನೈಜ ಪ್ರಾಣಿಗಳನ್ನೇ ಹೋಲುವ ಪ್ರಾಣಿಗಳ ಎದುರು ಫೊಟೋ ತೆಗೆಸಿಕೊಂಡು ಸಂಭ್ರಮ ಪಟ್ಟರು.

ಮೇಳದೊಳಗೆ ಏನೇನಿದೆ…: ಕಾರುಗಳ ಮಾಹಿತಿ ಹಾಗೂ ಬುಕ್ಕಿಂಗ್ ಮಳಿಗೆ, ಚಿನ್ನಾಭರಣ ಮಳಿಗೆ, ಗೃಹಬಳಕೆ ಉತ್ಪನ್ನಗಳು, ಪೀಠೋಪಕರಣಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಸ್ಟೇಷನರಿ, ಹ್ಯಾಂಡ್ಲ್ಯೂಮ್, ಫಿಶ್ ಮಸಾಜ್, ನರ್ಸರಿ, ಆಹಾರೋತ್ಪನ್ನಗಳು ಸೇರಿದಂತೆ ಇನ್ನೂ ನೂರಾರು ಉತ್ಪನ್ನಗಳನ್ನು ಕಾಣುವ, ಖರೀದಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇನ್ನು ವಿವಿಧ ಬಗೆಯ ತಿಂಡಿ-ತಿನಿಸುಗಳು ದೊರೆಯುವಂತಹ ಫುಡ್ ಕೋರ್ಟ್ ಇಲ್ಲಿದೆ. ಮನೋರಂಜನಾ ಕ್ರೀಡೆಗಳು, ಡ್ಯಾಶಿಂಗ್ ಕಾರು, ಟೊರ-ಟೊರ, ಸ್ಪೈಸ್ ಜೆಟ್, ಕೊಲಂಬಸ್, ಜಾಂಟ್‌ವ್ಹೀಲ್, ಬ್ರೇಕ್ ಡ್ಯಾನ್ಸ್, ಡ್ರ್ಯಾಗನ್ ಟ್ರೈನ್, ಹೋರ್ಸ್ ಎಂ.ಜಿ.ಆರ್, ಜಂಪಿಂಗ್ ಜಾಕ್, ಆರ್ ಶೂಟ್, ಜಂಪಿಂಗ್ ಫ್ರಾಗ್, ೩ಡಿ ಶೋ, ಸ್ಕ್ಯಾರೀ ಹೌಸ್,ಆಕ್ವ ಬರ್ಡ್ ಶೋ ಹಾಗೂ ಮಕ್ಕಳ ಬೋಟಿಂಗ್ ಸಹಿತ ಇನ್ನೂ ಹಲವಾರು ಕ್ರೀಡೆಗಳು ಮನರಂಜಿಸಲಿವೆ. ಪ್ರತಿದಿನ ಸಂಜೆ ೪ರಿಂದ ರಾತ್ರಿ ೯.೦೦ ಗಂಟೆವರೆಗೆ ಈ ಮೇಳ ನಡೆಯಲಿದೆ.

ಮಲೇಶಿಯನ್ ಟ್ವಿನ್ ಟವರ್ ರಿಪ್ಲಿಕಾ: ಪುತ್ತೂರಿನಲ್ಲಿ ನ್ಯಾಷನಲ್ ಕನ್ಸ್ಯೂಮರ್ ಫೇರ್ ಆಯೋಜಿಸಿರುವ `ಪುತ್ತೂರು ಉತ್ಸವ’ದಲ್ಲಿ ೯೦ ಅಡಿ ಎತ್ತರದ ಮಲೇಶಿಯನ್ ಟ್ವಿನ್ ಟವರ್‌ನ ರಿಪ್ಲಿಕಾ ವಿಶೇಷವಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕೃತವಾಗಿ ಕಂಗೊಳಿಸುವ ಈ ಟವರ್ ಸುತ್ತ ನಿಂತು ಸೆಲ್ಫೀ, ಫೊಟೋ ತೆಗೆಯಲು ಅವಕಾಶವಿದೆ.
ಸೆಲ್ಪೀ ಪ್ರಿಯರಿಗಿದೆ ಸೆಲ್ಫೀ ಗ್ಯಾಲರಿ: ಇದು ಸೆಲ್ಫಿ ಪ್ರಿಯರಿಗೆ ಸಂತಸದ ವಿಚಾರವಾಗಿದೆ. ವಿವಿಧ ಚಿತ್ರ ಪಟಗಳ ಮುಂಭಾಗದಲ್ಲಿ ನಿಂತು ತಮ್ಮ ಫೊಟೋ ಅಥವಾ ಸೆಲ್ಪಿ ತೆಗೆದುಕೊಳ್ಳ ಬಹುದಾಗಿದೆ. ಇಲ್ಲಿ ತೆಗೆದ ಫೊಟೋಗಳು ನೈಜತೆಯಿಂದ ಕೂಡಿದ ಫೋಟೋದಂತಿರುತ್ತದೆ.

ಪ್ರಾಣಿಪ್ರಿಯರಿಗಿದೆ ರೊಬೊಟಿಕ್ ಅನಿಮಲ್: ಪ್ರಪಂಚದ ವಿವಿಧ ದೇಶಗಳಲ್ಲಿ ಕಾಣಸಿಗುವ ಪ್ರಾಣಿಗಳನ್ನು ಹೋಲುವ ಯಾಂತ್ರೀಕೃತ ಮೃಗಗಳು ಇಲ್ಲಿದೆ. ಆನೆ, ಜೀಬ್ರಾ, ಪಾಂಡಾ, ಖಡ್ಗಮೃಗ, ಹುಲಿ, ನೀರಾನೆ, ಕಿಂಗ್‌ಕಾಂಗ್ ಹೀಗೆ ಹಲವಾರು ಬಗೆಯ ಪ್ರಾಣಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಇವೆಲ್ಲದರ ಬಗೆಗಿನ ಮಾಹಿತಿಗಳು ಅಲ್ಲಿವೆ ಮಾತ್ರವಲ್ಲದೆ ಅವುಗಳು ಕೂಗುವ ಶಬ್ಧವನ್ನು ನಾವು ಕೇಳಬಹುದಾಗಿದೆ.

ಸಹಕಾರಕ್ಕೆ ಚಿರ ಋಣಿ
ಜನರ ಸಹಕಾರಕ್ಕೆ ಚಿರಋಣಿಯಾಗಿದ್ದೇನೆ. ಮೇಳದ ಉದ್ಘಾಟನಾ ದಿನವೇ ಇಷ್ಟೊಂದು ಜನಸಾಗರ ಕಂಡು ತುಂಬಾ ಸಂತಸವಾಗಿದೆ. ಕಳೆದ ಬಾರಿಯೂ ಜನರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆತಿದೆ. ಕರಾವಳಿ ಭಾಗದ ಜನರ ಉತ್ಸಾಹ ಕಂಡು ಈ ಬಾರಿ ಮಲೇಷಿಯನ್ ಟ್ವಿನ್ ಟವರ್‌ನ ರೀಪ್ಲಿಕಾ, ಸೆಲ್ಪಿ ಗ್ಯಾಲೆರಿಯನ್ನು ವ್ಯವಸ್ಥೆ ಮಾಡಿzವೆ. ಇದೊಂದು ಸಂಪೂರ್ಣ ಮನೋರಂಜನಾ ಹಾಗೂ ವಸ್ತು ಪ್ರದರ್ಶನಗಳ ಮೇಳವಾಗಿದ್ದು. ಈ ಭಾಗದ ಜನರ ಸಹಕಾರ ಅಗತ್ಯ.
ಗೌತಮ್, ನಿರ್ದೇಶಕರು ನ್ಯಾಷನಲ್ ಕನ್ಸ್ಯೂಮರ್ ಫೇರ್

ಪ್ರೋತ್ಸಾಹ ಅಗತ್ಯ
ಪುತ್ತೂರು ಉತ್ಸವವನ್ನು ಕಳೆದ ಬಾರಿಗಿಂತ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಆಯೋಜನೆ ಮಾಡಿzವೆ. ಕಳೆದ ಬಾರಿ ಜನರು ನಮ್ಮ ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ. ಈ ಮೇಳದೊಳಗೆ ಸುಮಾರು ೬೦ಕ್ಕಿಂತ ಹೆಚ್ಚಿನ ಸ್ಟಾಲ್‌ಗಳಿವೆ. ಹಾಗೆಯೇ ಫುಡ್ ಕೋರ್ಟ್, ಅಮ್ಯೂಸ್ ಮೆಂಟ್ ರೈಟ್ಸ್ ಒಂದೇ ಸೂರಿನಡಿಯಲ್ಲಿ ಸಿಗಲಿದೆ. ಈ ಬಾರಿಯೂ ಜನರು ಉತ್ತಮ ಪ್ರೋತ್ಸಾಹ ನೀಡುತ್ತಾರೆ ಎನ್ನುವ ಭರವಸೆ ಇದೆ.
-ರಾಮ್‌ದಾಸ್ ಶೆಟ್ಟಿ ವಿಟ್ಲ ಆಯೋಜಕರು ಪುತ್ತೂರು ಉತ್ಸವ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.