ಧರ್ಮಸ್ಥಳ ದೇವಿಪ್ರಸಾದ್ ಬೊಳ್ಮರಿಗೆ ಗೌರವ ಡಾಕ್ಟರೇಟ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಧರ್ಮಸ್ಥಳ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಇದರ ಸ್ಥಳೀಯಾಡಳಿತವಾದ ಧರ್ಮಸ್ಥಳ ಗ್ರಾ.ಪಂ ನಲ್ಲಿ ಕ್ಲರ್ಕ್ ಆಗಿ ಸೇವೆಲ್ಲಿಸುತ್ತಿರುವ ದೇವಿಪ್ರಸಾದ್ ಬೊಳ್ಮ ಇವರು ಗ್ರಾ. ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘ ಇದರ ರಾಜ್ಯಾಧ್ಯಕ್ಷರಾಗಿ ಮಾಡುತ್ತಿರುವ ಸಂಘಟನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಇಂಟರ್‌ನ್ಯಾಶನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯದ 5 ಸಂಘ ಸಂಸ್ಥೆಗಳ ಶಿಫಾರಸಿನಂತೆ ಈ ಆಯ್ಕೆ ನಡೆದಿದೆ.
ಗ್ರಾ. ಪಂ. ನೌಕರರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸರಕಾರದ ವಿರುದ್ಧ ಯಾವುದೇ ಪ್ರತಿಭಟನೆ ಹೋರಾಟ ಮುಷ್ಕರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವಂತಹಾ ಯಾವುದೇ ಚಳವಳಿಯನ್ನು ರೂಪಿಸದೆ ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಗೌರವಯುತವಾಗಿ ಸರಕಾರದೊಂದಿಗೆ ಮನವಿ ಹಾಗೂ ಮಾತುಕತೆಗಳ ಮೂಲಕವೇ ಸರಕಾರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆಯೊಂದಿಗೇ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಮುಖ ಪ್ರಾತ್ರವಹಿಸಿದ್ದಾರೆ.

ಇವರ ಸಂಘಟನಾ ಚಟುವಟಿಕೆಯನ್ನು ಗುರುತಿಸಿ ರಾಜ್ಯ ಯುವ ಒಕ್ಕಲಿಗರ ಸಂಘ (ರಿ) ಕರ್ನಾಟಕ ಇವರು ರಾಜ್ಯ ಕಾರ್ಯದರ್ಶಿಯನ್ನಾಗಿ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ (ರಿ) ಬೆಂಗಳೂರು ಇವರು ಪತ್ರಿಕಾ ಕಾರ್ಯದರ್ಶಿಯನ್ನಾಗಿ ಈಗಾಗಲೇ ಅವರಿಗೆ ಜವಾಬ್ದಾರಿ ವಹಿಸಿರುತ್ತದೆ.

ಉತ್ತಮ ಬೂತ್ ಮಟ್ಟದ ಅಧಿಕಾರಿ:
ಇವರು ಭಾರತ ಚುನಾವಣಾ ಆಯೋಗದ ಬೂತ್ ಮಟ್ಟದ ಅಧಿಕಾರಿಯಾಗಿ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ೨೦೧೫ ನೇ ಲೋಕಸಭೆ ಹಾಗೂ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಉತ್ತಮ ಬೂತ್ ಮಟ್ಟದ ಅಧಿಕಾರಿ ಎಂಬ ಪ್ರಶಂಸನೆಗೆ ಪಾತ್ರರಾಗಿ ಆಗಿನ ಡಿ.ಸಿ ಆಗಿದ್ದ ಎ.ಬಿ ಇಬ್ರಾಹಿಂ ಅವರಿಂದ ಮನ್ನಣೆ ಪತ್ರ ಪಡೆದಿದ್ದಾರೆ.


ನೆರೆ ಸಂತ್ರಸ್ತರಿಗೆ ನೆರವು:

ತಾಲೂಕಿನಲ್ಲಿ ಇತ್ತೀಚೆಗೆ ನೆರೆ ಬಂದಿದ್ದ ಸಂದರ್ಭ ಸಂತ್ರಸ್ತರ ಮನೆಗಳಿಗೆ ಅಡುಗೆ ಪಾತ್ರೆಗಳು ಹಾಗೂ ದಿನಸಿ ಸಾಮಗ್ರಿಗಳನ್ನು ಒದಗಿಸುವಲ್ಲಿ ಹಾಗೂ ನೆರೆ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಉದ್ಯೋಗ ಭರವಸೆಯನ್ನು ಅಶ್ವಿನ್ ಪ್ರಾಡೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖಾಂತರ ಮಾಡಿದ್ದರು.


ಸಂಘ ಸಂಸ್ಥೆಗಳಲ್ಲೂ ಭಾಗಿ:
ಕನ್ಯಾಡಿ ಬೊಳ್ಮ ನಿವಾಸಿಯಾಗಿರುವ ದೇವಿಪ್ರಸಾದ್ ಅವರು ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀರಾಮಕ್ಷೇತ್ರ, ಸಾರ್ವಜನಿಕ ಗ್ರಾಮ ದೈವಸ್ಥಾನ ದೊಂಪದ ಬಲಿ ಉತ್ಸವ ಸಮಿತಿ ಕನ್ಯಾಡಿ, ಸೇವಾ ಭಾರತಿ ಕನ್ಯಾಡಿ, ಶ್ರೀ ಶಾರದೋತ್ಸವ ಸಮಿತಿ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀರಾಮ ಭಜನಾ ಮಂಡಳಿ ದೊಂಡೋಲೆ, ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಸೇರಿದಂತೆ ಊರಿನ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.


ಸೆ. 29 ರಂದು ಗೌರವ ಪ್ರದಾನ:
ಸದ್ರಿ ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭ ಸೆ. 29 ರಂದು ಸೌತ್ ಇಂಡಿಯಾ ಹೊಸೂರು ಕ್ಲಾರೆಸ್ಟಾ ಹೊಟೇಲ್‌ನಲ್ಲಿ ನಡೆದಿದ್ದು ಡಾ. ಕೆ ಅಶೋಕ್ ಕುಮಾರ್ ಫೌಂಡರ್ ಐಜಿಪಿಯು, ಡಾ| ಬಿ. ಮೊಗಲ್‌ರಾಜ್ ನ್ಯೂಸ್ ರೀಡರ್, ಮಕ್ಕಳ ಟಿವಿಯ ಡಾ| ಸಿ.ಆರ್.ಸಿ.ಆರ್ ಭಾಸ್ಕರನ್, ಕೆ.ಎ ಮನೋಹರ್, ಮಿಸೆಸ್ ಇಂಡಿಯಾ ಪ್ರೀತಿ ರಾಜ್, ಡಾ| ಪಲ್ಲವಿ ಸಿಂಧಿ ಪಿ.ಯು ಕಾಲೇಜು ಬೆಂಗಳೂರು, ಡಾ| ಸಿಪ್‌ಸಿಪ್ ಪಾಲ್ ಎಬಿನೇಜರ್ ನಿರ್ದೇಶಕರು ಐಜಿಪಿಯು, ಡಾ| ಆರ್. ಹರಿಕೃಷ್ಣ ಅಧ್ಯಕ್ಷರು ಗೋಪಿ ಅಸೋಸಿಯೇಟ್ಸ್, ಡಾ| ಚಂದನ್ ನೋಂದಣಾಧಿಕಾರಿ ಐಜಿಪಿಯು, ಡಾ| ಲಕ್ಷ್ಮಿ ಶ್ರೀನಿವಾಸ್ ಖ್ಯಾತ ಜ್ಯೋತಿಷಿ, ಡಾ| ರಂಗನಾಥ ಸ್ವಾಮಿ ಎಚ್.ಆರ್ ಖ್ಯಾತ ರೇಖ ಜ್ಯೋತಿಷಿ, ಆರ್. ಬಾಲಾಜಿ ಚೇರ್ಮನ್ ಅಧ್ಯಕ್ಷರು ಸಿಬಿಡಿ ಅಸೋಸಿಯೇಷನ್, ಡಾ| ಗುಣವಂತ ಮಂಜು ಚಲನಚಿತ್ರ ನಟರು ಹಾಗೂ ನಿರ್ದೇಶಕರು, ಸಾಧನಾ ಚಲನಚಿತ್ರ ನಟಿ ಇವರ ಸಮ್ಮುಖ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.