ವಕೀಲರ ಸಂಘದ ಮಹಾಸಭೆ: ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ಮಹಾಸಭೆಯು ಸೆ. 23 ರಂದು ಸಂಘದ ಅದ್ಯಕ್ಷರಾದ ಸೇವಿಯರ್ ಪಾಲೇಲಿ ಯವರ ಅದ್ಯಕ್ಷತೆಯಲ್ಲಿ ಸಂತೆಕಟ್ಟೆಯ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.
ಸಂಘದ ಉಪಾದ್ಯಕ್ಷರಾದ ಶ್ರೀನಿವಾಸ ಗೌಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್, ಎ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಗಣೇಶ ಗೌಡ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು ಅಕಾಲಿಕ ಮರಣಕ್ಕೆ ತುತ್ತಾದ ಆನಂದ ಶೆಟ್ಟಿಯವರ ಕುಟುಂಬಕ್ಕೆ ಸಂಘದ ವತಿಯಿಂದ ಸಾಂತ್ವಾನ ನಿಧಿ ರೂ. 25,000/- ವನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಹಿರಿಯರ ಸಮಿತಿ ಅದ್ಯಕ್ಷರಾದ ಶಶಿಕಿರಣ್ ಜೈನ್, ಜತೆ ಕಾರ್ಯದರ್ಶಿ ಮಮ್ತಾಜ್ ಬೇಗಂ, ಕಾರ್ಯಕಾರಿ ಸಮಿತಿ ಸದಸ್ಯರಾದ ಜೆ. ಕೆ ಪೌಲ್, ಬಿ.ಕೆ ಧನಂಜಯ ರಾವ್, ಸುಭಾಶಿನಿ ಅನಂತ್ ಎಂ. ಬಿ ಸಂಪಿಗೆತ್ತಾಯ, ಶೈಲೇಶ್ ಆರ್ ಟೋಸರ್ ಮತ್ತು ಕ್ರೀಡಾ ಕಾರ್ಯದರ್ಶಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.