ಧರ್ಮಸ್ಥಳದಲ್ಲಿ ನವರಾತ್ರಿ ಕಾರ್ಯಕ್ರಮ

 

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಸೆ29 ರಿಂದ ಅ.6ರವರೆಗೆ ದೇವಳ ಬಳಿಯ ಪ್ರವಚನ ಮಂಟಪದಲ್ಲಿ ಸಾಯಂಕಾಲ 6ರಿಂದ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ29ರಂದು ಪದ್ಮುಂಜದ ಶ್ರದ್ದಾಕೋಟೆ-ಶಾಸ್ತ್ರೀಯ ಸಂಗೀತ, 30ರಂದು ಮೈಸೂರಿನ ಉಪ್ಪುಂದ ರಾಜೇಶ್ ಪಡಿಯಾರ್-ಸುಗಮ ಸಂಗೀತ, ಅ.01 ರಂದು ಮೈಸೂರಿನ ಎಂ.ಆರ್ ಸುಮಂತ್ ವಸಿಷ್ಟ-ಸುಗಮ ಸಂಗೀತ, 2 ರಂದು ಧರ್ಮಸ್ಥಳ ಸುನೀಲ್ ಕುಮಾರ್-ಕೊಳಲು ವಾದನ, 3 ರಂದು ಕಾರ್ಕಳದ ವೈ ಅನಂತಪದ್ಮನಾಭ ಭಟ್-ಹರಿಕಥಾ ಕಾಲಕ್ಷೇಪ, 4 ರಂದು ಬೆಂಗಳೂರಿನ ಕೆ.ಎಸ್ ಮಂಜುನಾಥ-ಸುಗಮ ಸಂಗೀತ, 5ರಂದು ಕಾಸರಗೋಡಿನ ವಿದ್ವಾಂಸ ಹಿರಣ್ಯ ವೆಂಕಟೇಶ್ ಭಟ್-ಶ್ರೀಚಕ್ರದ ಮಹತ್ವ ಉಪನ್ಯಾಸ, 6ರಂದು ಸಾಗರದ ವಿನಯಾದೇವರಾಜ್-ಭಕ್ತಿ ಸುಧೆ ಮತ್ತು ಉಡುಪಿಯ ಜಯೇಂದ್ರ ಆಮೀನ್-ಸುಗಮ ಸಂಗೀತ ಕಾರ್ಯಕ್ರಮ ಧರ್ಮಸ್ಥಳದಲ್ಲಿ ನವರಾತ್ರಿ ಪ್ರಯುಕ್ತ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.