ಪಿಎಲ್‌ಡಿ ಬ್ಯಾಂಕ್‌ಗೆ ಘೋಷಣೆಯಾಗಿದ್ದ ಪ್ರಶಸ್ತಿ ಸ್ವೀಕಾರ

Advt_NewsUnder_1
Advt_NewsUnder_1

ಬೆಳ್ತಂಗಡಿ: 2019ನೇ ಸಾಲಿನ ಸಾಲ ವಸೂಲಾತಿಯಲ್ಲಿ ದ.ಕ-ಉಡುಪಿ ಉಭಯ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನಿಯಾಗುವುದರ ಜೊತೆಗೆ ಉತ್ತಮ ವ್ಯವಹಾರ ನಡೆಸಿದ ಬೆಳ್ತಂಗಡಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್)ಗೆ ಘೋಷಣೆಯಾಗಿದ್ದ ಪ್ರಶಸ್ತಿಯನ್ನು ಸೆ. 25 ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಈ ಬಹುಮಾನವನ್ನು ಬ್ಯಾಂಕಿನ ಪ್ರತಿನಿಧಿಗಳಾದ, ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ಹಾಗೂ ಪ್ರಭಾರ ಮೆನೇಜರ್ ಗಿರಿಧರ್ ಅವರು ಎಲ್ಲ ಕೃಷಿಕರ ಪರವಾಗಿ ಸ್ವೀಕರಿಸಿದರು.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಕೆ. ಷಡಕ್ಷರಿ, ಉಪಾಧ್ಯಕ್ಷ ಈಶ್ವರ ನಾರಾಯಣ ನಾಯ್ಕ, ಆಡಳಿತ ನಿರ್ದೇಶಕ ಎ. ಸಿ. ದಿವಾಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.