ನೆರೆ ಪೀಡಿತ 25 ಫಲಾನುಭವಿಗಳಿಗೆ ಕಪಾಟು ವಿತರಣೆ

Advt_NewsUnder_1
Advt_NewsUnder_1
Advt_NewsUnder_1

  ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ತಾಲೂಕು ಔಷಧ ವ್ಯಾಪಾರಸ್ಥರ  ಸಂಘ

 ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಜೌಷಧ ವ್ಯಾಪಾರಸ್ಥರ ಸಂಘ ಇದರ ವತಿಯಿಂದ ವರ್ಲ್ಡ್ ಫಾರ್ಮಸಿಸ್ಟ್ ಡೇ ಮತ್ತು ವಾರ್ಷಿಕ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ 16  ಗ್ರಾಮಗಳಲ್ಲಿ ಭೀಕರ ಪ್ರವಾಹದಿಂದ ಮನೆ ಕಳೆದುಕೊಂಡ 25 ಕುಟುಂಬಗಳಿಗೆ ಕಪಾಟುಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಫಲಾನುಭವಿಗಳಿಗೆ ಕೀ ಹಸ್ತಾಂತರಿಸಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರು ಮಾತನಾಡಿ, ತಾಲೂಕಿನಲ್ಲಿ ಪ್ರವಾಹದಿಂದ ಆದ ಹಾನಿಯ ಬಗ್ಗೆ ತಾಲೂಕು ಆಡಳಿತದೊಂದಿಗೆ ಎಲ್ಲಾ ಸಂಘ-ಸಂಸ್ಥೆಯವರು, ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಯಾವುದೇ ಕೆಲಸ ಆಗಬೇಕಾದರೂ ಸಂಸ್ಥೆಯವರು ಮುಂಚೂಣಿಯಲ್ಲಿ ನಿಂತು ಮಾಡಿದ್ದಾರೆ. ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ಕೊಡುವುದು ದೊಡ್ಡ ಗುಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಮಾತನಾಡಿ, ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು, ಅಶಕ್ತರಿಗೆ ಸಹಾಯ ಮಾಡುವುದು, ನೆರವು ನೀಡುವುದು ದೇವರಿಗೆ ಪ್ರೀತಿಯಾದ ಸೇವೆಯಾಗಿದೆ.  ಸಂಘಟನೆ ನಗರದಲ್ಲಿ ನಿವೇಶನ ಮಾಡಿದರೆ ತನ್ನ ವಿಧಾನ ಪರಿಷತ್ ನಿಧಿಯಿಂದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞೆ ಡಾ| ಪ್ರತ್ಯೂಷ ಅವರು ಮಾತನಾಡಿ ಸ್ವಯಂ ಜೌಷಧಿ ಚಿಕಿತ್ಸೆಯ ಅಡ್ಡ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆಯಿತ್ತರು.
ಸಂಘದ ಅಧ್ಯಕ್ಷ ಜಗದೀಶ್ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಜೌಷಧಿ ವ್ಯಾಪಾರಸ್ಥರ ಸಂಘ ಕಳೆದ 11  ವರ್ಷಗಳಲ್ಲಿ ವಿವಿಧ ಸಮಾಜ ಸೇವಾ ಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದಕ್ಕೆ ತಾಲೂಕಿನ 51  ಮೆಡಿಕಲ್‌ನವರು ಪೂರ್ಣ ಸಹಕಾರ ನೀಡಿದ್ದಾರೆ. ತಾವು ದುಡಿದುದರಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವುದರಿಂದ ಇದರ ಪುಣ್ಯ ಎಲ್ಲರ ಕುಟುಂಬಗಳಿಗೆ ದೊರೆಯುತ್ತದೆ ಎಂದು ಹೇಳಿ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಕೇಶವ ಭಟ್, ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು. ಅಶ್ಚಿನಿ ಡಿ. ಇವರ ಪ್ರಾರ್ಥನೆ ಬಳಿಕ ಸಂಘದ ಅಧ್ಯಕ್ಷ ಜಗದೀಶ್ ಡಿ. ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಲಕ್ಷ್ಮಣ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸುಜಿತ್ ಭಿಡೆ ವರದಿ ವಾಚಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ಜೌಷಧ ಅಂಗಡಿ ಧರ್ಮಸ್ಥಳದ ಅನ್ನಪೂರ್ಣ ಮೆಡಿಕಲ್ಸ್‌ನ ರಜತ್ ರಾವ್ ಮತ್ತು ತಾಲೂಕಿನ ಹಿರಿಯ ಫಾರ್ಮಾಸಿಸ್ಟ್ ಧರ್ಮಸ್ಥಳ ಧರ್ಮಶ್ರೀ ಮೆಡಿಕಲ್ಸ್‌ನ ವಿಷ್ಣು ಭಟ್ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರ ರಜತ್ ರಾವ್ ಅನಿಸಿಕೆ ವ್ಯಕ್ತಪಡಿಸಿದರು. ಮಡಂತ್ಯಾರು ಮಹಾವೀರ ಮೆಡಿಕಲ್ಸ್‌ನ ಉದಯ ಕುಮಾರ್ ಮತ್ತು ಗುರುದೇವಿ ಮೆಡಿಕಲ್ಸ್ ಉಜಿರೆಯ ಗುರುರಾಜ್ ಪಡ್ವೆಟ್ನಾಯ ಸನ್ಮಾನಪತ್ರ ವಾಚಿಸಿದರು.

25 ಫಲಾನುಭವಿಗಳಿಗೆ ಕಪಾಟು ವಿತರಣೆ
ಲಿಂಗಪ್ಪ ಗೌಡ ನಾವೂರು, ಮಹೇಶ್ ದಿಡುಪೆ, ಕೆ.ಎಮ್ ಅಬ್ದುಲ್ ರಶೀದ್ ಕಿಲ್ಲೂರು, ಗುಲಾಬಿ ಚಾರ್ಮಾಡಿ, ಜಯಶ್ರೀ ಇಂದಬೆಟ್ಟು, ಬಾಬು ಪೂಜಾರಿ ಚಾರ್ಮಾಡಿ, ಯಶೋಧರ ಕುಕ್ಕಾವು, ಕಿಟ್ಟಣ್ಣ ಚಾರ್ಮಾಡಿ, ಇಂದಿರಾ ದಿಡುಪೆ, ಗಿರಿಜಾ ಚಾರ್ಮಾಡಿ, ದೇವರಾಜ್ ಪೂಜಾರಿ ಚಾರ್ಮಾಡಿ, ವೇದಾವತಿ ಚಾರ್ಮಾಡಿ, ಶೇಖರ ಗೌಡ ಚಾರ್ಮಾಡಿ, ಕಮಲ ಪೂಜಾರಿ ಚಾರ್ಮಾಡಿ, ನಿಶಾಂತ್ ಕೊಲಂಬೆ, ಖತೀಜಮ್ಮ ಚಾರ್ಮಾಡಿ, ಹರೀಶ ಗೌಡ ಕೊಲಂಬೆ, ಕರಿಯ ಗೌಡ ಪುದುವೆಟ್ಟು, ರಾಜು ಪೂಜಾರಿ ಕೊಲಂಬೆ, ಸರೋಜ ಅಂತರ ಚಾರ್ಮಾಡಿ, ಮೋನಪ್ಪ ಗೌಡ ಕೊಲಂಬೆ, ಗ್ರೇಸಿ ಬೊಳ್ಮನಾರು, ಸೆಬಾಸ್ಟಿಯನ್ ಬೊಳ್ಮಾನಾರು, ವಿನಯ ಪುತ್ರಬೈಲು ಲಾಲ, ಅಬ್ದುಲ್ ಮಜೀದ್ ಇಂದಬೆಟ್ಟು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.