ಮುಹಮ್ಮದ್ ಹನೀಫ್ ತಂದೆ ಅಲ್‌ಹಾಜ್ ಹಾಜಬ್ಬ ಕಾಶಿಬೆಟ್ಟು ನಿಧನ

ಉಜಿರೆ: ಇಲ್ಲಿನ ಕಾಶಿಬೆಟ್ಟು ನಿವಾಸಿ, ಬೆಳ್ತಂಗಡಿಯ ಯುವ ಉದ್ಯಮಿ, ರಾಷ್ಟ್ರೀಯ ಭಾವೈಖ್ಯತಾ ಪ್ರಶಸ್ತಿ ಪುರಸ್ಕೃತ ಯು.ಕೆ ಮುಹಮ್ಮದ್ ಹನೀಫ್ ಅವರ ತಂದೆ ಅಲ್‌ಹಾಜ್ ಹಾಜಬ್ಬ ಕಾಶಿಬೆಟ್ಟು (೮೪ವ.) ವಯೋಸಹಜ ಆನಾರೋಗ್ಯದಿಂದ ಸೆ.(26) ಇಂದು   ಬೆಳಗ್ಗೆ ಪುತ್ರನ ಮನೆ ಉಜಿರೆ ಹಳೆಪೇಟೆಯಲ್ಲಿ ನಿಧನರಾಗಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನಿರ್ಮಾಣ ಸಂಸ್ಥೆ ಡಿಎಂಸಿಯಲ್ಲಿ ಸುಮಾರು 16 ವರ್ಷಗಳ ಕಾಲ ಕಟ್ಟಡ ಮತ್ತು ಇತರ ನಿರ್ಮಾಣ ಸಂಸ್ಥೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ನೂರಾರು ಕಾರ್ಮಿಕರಿಗೆ ಮಾರ್ಗದರ್ಶನ ನೀಡುತ್ತಾ ಅವರ ನಿಯಂತ್ರಣ ನಡೆಸುತ್ತಿದ್ದ ಅವರು ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು. ಇದೀಗ ನಿವೃತಿಯ ಬಳಿಕ ಮಕ್ಕಳ ಮನೆಗಳಲ್ಲಿ ವಿಶ್ರಾಂತಿಯಲ್ಲಿದ್ದರು.
ಮೃತರು ಪತ್ನಿ ಬೀಫಾತಿಮಾ, ಪುತ್ರ ಮುಹಮ್ಮದ್ ಹನೀಫ್ ಸೇರಿದಂತೆ ಇನ್ನಿಬ್ಬರಾದ ಜಾವೆದ್ ಮತ್ತು ಅಬ್ದುಶ್ಶುಕೂರ್, ಮೂವರು ಪುತ್ರಿಯರಾದ ನಫೀಸಾ, ಆಮಿನಾ ಮತ್ತು ರಹ್ಮತ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.