ಗ್ರಾಮಸಭೆಯಲ್ಲಿ ದಲಿತ ಸಮಾಜಕ್ಕೆ ಅಪಮಾನ ಎಟ್ರಾಸಿಟಿ ಕೇಸಿನಲ್ಲಿ ವ್ಯಕ್ತಿಯ ಬಂಧನ

Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಗ್ರಾಮಸಭೆಯಲ್ಲಿ ದಲಿತ ಸಮುದಾಯವನ್ನು ಅವ್ಯಾಚ್ಯವಾಗಿ ನಿಂದಿಸಿದ ವ್ಯಕ್ತಿಯೊರ್ವರನ್ನು ಎಟ್ರಾಸಿಟಿ ಕೇಸಿನ ಮೇಲೆ ವೇಣೂರು ಪೊಲೀಸರು ಬಂಧಿಸಿದ ಘಟನೆ ಸೆ.25  ರಂದು ನಡೆದಿದೆ.
ಬಡಗಕಾರಂದೂರು ಗ್ರಾಮದ ದರ್ಖಾಸು ನಿವಾಸಿ ಸೆವೆರಾ ಪಿರೇರಾ ಎಂಬವರು ಬಂಧಿತರು.
ಜುಲೈ 18 ರಂದು ನಡೆದ ಅಳದಂಗಡಿ ಗ್ರಾಮಸಭೆಯಲ್ಲಿ ಸವೆರಾ ಪಿರೇರಾ ಅವರು ಸಾರ್ವಜನಿಕವಾಗಿ ದಲಿತ ಸಮುದಾಯಕ್ಕೆ ನೊವಾಗುವ ರೀತಿಯಲ್ಲಿ ಬಹಿರಂಗವಾಗಿ ಮಾತನಾಡಿದ್ದರು. ಈ ಬಗ್ಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮುಖಂಡ ಕೂಸ ಅಳದಂಗಡಿ ಅವರು ಗ್ರಾಮ ಪಂಚಾಯತ್ ನಿಂದ ವೀಡಿಯೋ ದಾಖಲೆ ಪಡೆದು ವೇಣೂರು ಪೊಲೀಸ್ ಠಾಣೆ ಹಾಗೂ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ದೂರು ನೀಡಿದ್ದರು.  ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ವೇಣೂರು ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.