ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾಗಿ ಎಲೋಶಿಯಸ್ ಲೋಬೋ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕು ವಕೀಲರ ಸಂಘದ ಅಧ್ಯಕ್ಷಗಾದಿಗೆ ಸೆ.23 ರಂದು ನಡೆದ ಚುನಾವಣೆಯಲ್ಲಿ ಹಿರಿಯ ನ್ಯಾಯವಾದಿ, ಕ್ರೈಸ್ತ ವಿವಾಹ ನೋಂದಣಾಧಿಕಾರಿಯೂ ಆಗಿರುವ ಎಲೋಶಿಯಸ್ ಲೋಬೋ 9  ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಒಂದು ಅವಧಿಯ ಬಳಿಕ ಮತ್ತೊಮ್ಮೆ ಬೆಳ್ತಂಗಡಿ ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲೋಶಿಯಸ್ ಲೋಬೋ ಮತ್ತು ಪ್ರಸಾದ್ ಕೆ.ಎಸ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಿರಿಯ ನ್ಯಾಯವಾದಿ ಅಜಿತ್ ಅವರು ಚುನಾವಣಾಧಿಕಾರಿಯಾಗಿ ಇಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ನಡೆದ ಚುನಾವಣೆಯಲ್ಲಿ ಎಲೋಶಿಯಸ್ ಲೋಬೋ 38 ಮತಗಳನ್ನು ಪಡೆದುಕೊಂಡರೆ ಅವರ ಪ್ರತಿಸ್ಪರ್ಧಿ ಪ್ರಸಾದ್ ಕೆ.ಎಸ್ 29 ಮತಗಳನ್ನಷ್ಟೇ ಪಡೆದು ಪರಾಭವಗೊಂಡರು.   ಸಂಘದ ಕಾರ್ಯದರ್ಶಿಯಾಗಿ ಕೃಷ್ಣ ಶೆಣೈ ಅವರ ಆಯ್ಕೆ ಈಗಾಗಲೇ ನಡೆದಿದೆ.
ಪ್ರಸ್ತುತ ಆಡಳಿತ ಮಂಡಳಿ ಅಧ್ಯಕ್ಷ- ಕಾರ್ಯದರ್ಶಿಗಳಿಗೆ ಸನ್ಮಾನ:
ಪ್ರಸ್ತುತ ಚಾಲ್ತಿಯಲ್ಲಿರುವ ವಕೀಲರ ಸಂಘ ಈ ವರ್ಷ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಮೆಚ್ಚುಗೆಗೆ ಪಾತ್ರವಾಗಿದ್ದು ಇದರ ಅಧ್ಯಕ್ಷ ಸೇವಿಯರ್ ಪಾಲೇಲಿ ಮತ್ತು ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಲ ಅವರಿಗೆ ಮಹಾಸಭೆಯಲ್ಲಿ ಸನ್ಮಾನ ನಡೆಸಿ ಸದಸ್ಯರು ಗೌರವ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.