ಮಾನಸ ಜಿ.ಎಂ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್ ಮೇಲ್ದರ್ಜೆಗೆ: ಜೋಯೆಲ್ ಮೆಂಡೊನ್ಸಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪಿಲಿಕುಳ ನಿಸರ್ಗಧಾಮ ಮಾನಸ ಜಿ.ಎಂ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್ 2020ಕ್ಕೆ ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಆಡಳಿತ ನಿರ್ದೇಶಕ, ಮಾಲಾಡಿ ತಾ.ಪಂ ಸದಸ್ಯ ಜೋಯೆಲ್ ಗಾಡ್ ಫ್ರೀ ಮೆಂಡೊನ್ಸಾ ಹೇಳಿದರು.
ಅವರು ಸೆ.21 ರಂದು ಮಂಗಳೂರು ಮಾನಸ ಸಭಾಭವನದಲ್ಲಿ ನಡೆದ ಇಲ್ಲಿನ 19ನೇ ವರ್ಷದ ಮಹಾಸಭೆಯಲ್ಲಿ ಮಾತನಾಡಿದರು. ಕಂಪನಿ 2018-19ರಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಅಭಿವೃಧ್ಧಿಪಡಿಸಲಾಗಿದೆ. 2020ನೇ ಸಾಲಿಗೆ ಇನ್ನೂ ಅಭಿವೃದ್ಧಿ ಪಡಿಸಿ, ಇದರ ಸೇವೆಗಳು ಸಮಾಜಕ್ಕೆ ದೊರೆಯಲಿದೆ ಎಂದರು. ಕಂಪೆನಿ ಆರ್ಥಿಕ ವರ್ಷದಲ್ಲಿ 64 ಲಕ್ಷ ಲಾಭ ಗಳಿಸಿದ್ದು, ಈ ಲಾಭದ ಮೊತ್ತವನ್ನು ಕಂಪೆನಿಯ ಅಭಿವೃದ್ಧಿಗೆ ಬಳಸಲಾಗುವುದು. ಮುಂದಿನ ದಿನಗಳಲ್ಲಿ ಷೇರುದಾರರಿಗೆ ಡಿವಿಡೆಂಡ್ ನೀಡಲಾಗುವುದು ಎಂದರು. ವೇದಿಕೆಯಲ್ಲಿ ಶಾಶ್ವತ ನಿರ್ದೇಶಕ ಹಾಗೂ ಆರ್ಥಿಕ ವ್ಯವಹಾರದ ಮುಖ್ಯಸ್ಥ ಲೆನ್ಸಿ ಪಿಂಟೊ, ನಿರ್ದೇಶಕ ಜೋಸೆಫ್ ಪಿಂಟೊ, ಆ.ಜೆ ಇರಾನಿ ಉಪಸ್ಥಿತರಿದ್ದರು.
ಸಭೆಯನ್ನು ಕಂಪೆನಿ ಕಾರ್ಯದರ್ಶಿ ಚೇತನ್ ನಾಯಕ್ ನಡೆಸಿಕೊಟ್ಟರು. ನಿರ್ದೇಶಕ ವಿನ್ಸೆಂಟ್ ಫೀಟರ್ ಪಿಂಟೊ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.