ಎ.ಕೆ.ಜಿ ಸೊಸೈಟಿ, ಬ್ಲಡ್ ಹೆಲ್ಪ್‌ಲೈನ್ ಸಹಯೋಗದೊಂದಿಗೆ ರಕ್ತದಾನ ಶಿಬಿರ

ಬೆಳ್ತಂಗಡಿ: ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ, ಸಂಗಾತಿ ಎ.ಕೆ.ಜಿ.ಬೀಡಿ ಕಾರ್ಮಿಕರ ಗ್ರಹ ನಿರ್ಮಾಣ ಸಹಕಾರಿ ಸಂಘ, ಇವುಗಳ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ಹಾಗೂ ಎಚ್.ಡಿ.ಎಫ್.ಸಿ ಬ್ಯಾಂಕ್ ಬೆಳ್ತಂಗಡಿ, ಇವರ ಸಹಬಾಗಿತ್ವದೊಂದಿಗೆ ಸೆ. 21 ರಂದು ಬೆಳ್ತಂಗಡಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಎಕೆಜಿ ಸೊಸೈಟಿ ಅಧ್ಯಕ್ಷ ಹರಿದಾಸ್, ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಶಾಂತಾರಾಮ್, ಕಾರ್ಯದರ್ಶಿ ರವಿ ಉಚ್ಚಿಲ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಎ.ಕೆ.ಜಿ ಸೊಸೈಟಿ ನಿರ್ದೇಶಕರುಗಳಾದ ಯಶವಂತ ಮುರೋಳಿ, ಮಾಧವ ಸುವರ್ಣ, ಶೇಖರ ಎಲ್, ಸುಕನ್ಯಾ, ಶಿವಕಮಾರ್ ಹಾಗೂ ಇನ್ನಿತರ ಗಣ್ಯರು, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಇದರ ಕಾರ್ಯನಿರ್ವಾಹಕರು ಭಾಗಿಯಾಗಿದ್ದರು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 39 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.