ಧರ್ಮಸ್ಥಳ: ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

ಧರ್ಮಸ್ಥಳ :  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು (ಸೆ.21) ಇಂದು ಸಂಘದ ಅಟಲ್‌ಜೀ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹರಿದಾಸ ಗಾಂಭಿರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಹಿರಿಯ 10  ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿವೃತ ಇಬ್ಬರು ನೌಕರರನ್ನು ಸನ್ಮಾನಿಸಲಾಯಿತು. ಆರ್ಥೀಕ ವರ್ಷದಲ್ಲಿ ಶೇಕಡಾ 18% ಡಿವಿಡೆಂಟ್ ಘೋಷಿಸಲಾಗಿದ್ದು ಸದಸ್ಯರು ಡಿವಿಡೆಂಟ್‌ನ ಹಣದಲ್ಲಿ ಶೇಕಡಾ 2 % ತಾಲೂಕಿನ ನೆರೆ ಸಂತ್ರಸ್ತರ ನಿಧಿಗೆ ನೀಡಿವುದಾಗಿ ಘೋಷಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಪತಿ ಹೆಬ್ಬಾರ್.ಎಂ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರನ್.ಡಿ, ನಿರ್ದೇಶಕರುಗಳಾದ ಜಯರಾಂ ಭಂಡಾರಿ.ಎಂ, ರಘುಚಂದ್ರ ರಾವ್,ಪ್ರೀತಮ್.ಡಿ, ಅಜಿತ್ ಕುಮಾರ್ ಜೈನ್, ಆಶಾ ಸದಾಶಿವ , ಶಾಂಭವಿ ರೈ, ಸುಮಂಗಳಾ, ಉಮಾನಾಥ, ಶೀನ, ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿ ಸತೀಶ್ ಹೊಳ್ಳ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.