ಬೆಳ್ತಂಗಡಿ ಧ್ವನಿ ವರ್ಧಕ ಸಂಘದ ವಾರ್ಷಿಕ ಮಹಾಸಭೆ

ಉಜಿರೆ : ಬೆಳ್ತಂಗಡಿ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ವಾರ್ಷಿಕ ಮಹಾಸಭೆಯು ಉಜಿರೆಯ ಶಾರದಾ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅದ್ಯಕ್ಷ ರೋಹಿತ್‌ ಕುಮಾರ್ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮಿತ್ ಹಾಗೂ ಅಥರ್ವ ಮಂಗಳೂರು, ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು, ಕೆ.ಎ. ಮೂಸ ಮಂಗಳೂರು ಹಾಗೂ ನಾರಾಯಣ ಕೆ ಕುಂಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು
2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ. ನಾರಾಯಣಗೌಡ ಕುಂಡಡ್ಕ (ನಿಶ್ಮಿತಾ ಸೌಂಡ್ಸ &ಲೈಟಿಂಗ್ಸ್ ನಾವೂರು), ಉಪಾಧ್ಯಕ್ಷರಾಗಿ ನವೀನ್ (ಶ್ರೀ ಸಾಯಿ ಸೌಂಡ್ಸ್ ಮದ್ದಡ್ಕ), ಕಾರ್ಯದರ್ಶಿಯಾಗಿ ಸುಶಾಂತ್ (ಪಿಂಕಿ ಸೌಂಡ್ & ಲೈಟಿಂಗ್ಸ್ ವೇಣೂರು), ಜೊತೆ ಕಾರ್ಯದರ್ಶಿಯಾಗಿ ಸುರೇಶ್ (ಆದರ್ಶ ಸೌಂಡ್ಸ್ ಪಡಂಗಡಿ), ಕ್ರೀಡಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಮೀರ್ (ಪಪ್ಪು ಜನರೇಟರ್ ಬೆಳ್ತಂಗಡಿ) ಇವರುಗಳನ್ನು ಆಯ್ಕೆ ಮಾಡಲಾಯಿತು ಸುಮಾರು 80 ಕ್ಕೂ ಹೆಚ್ಚು ಸದಸ್ಯರು ಸಭೆಯಲ್ಲಿ ಹಾಜರಿದ್ದರು
ರಾಮ್ ಕುಮಾರ್  ಸ್ವಾಗತಿಸಿ , ಹರೀಶ್   ವಂದಿಸಿದರು. ಸುರೇಶ್  ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.