ಕಣಿಯೂರು: ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ

ಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯ ಹಾಗೂ ಗ್ರಾಮ ಪಂಚಾಯತ್ ಬಂದಾರು ಇವುಗಳ ಸಹಕಾರದೊಂದಿಗೆ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಬುಳೇರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಾಲೆಯ ಮುಖ್ಯಗುರುಗಳಾದ ಸುಚೇತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯ ಸೋಲಾರ್ ವ್ಯವಸ್ಥಾಪಕ ಗಿರೀಶ್ ರವರು ಸೋಲಾರ್ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹರಿಣಿ, ಇಳಂತಿಲ ಗ್ರಾ.ಪಂ.ಉಪಾಧ್ಯಕ್ಷೆ ಗುಲಾಬಿ ಉಪಸ್ಥಿತರಿದ್ದರು.

ಕಣಿಯೂರು  ವಲಯದ ಮೇಲ್ವಿಚಾರಕ ಮಾಧವ. M. ಸ್ವಾಗತಿಸಿ,   ಶಾಲೆಯ ಶಿಕ್ಷಕರಾದ  ಆಶಾ  ನಿರೂಪಿಸಿ, ಮೊಗ್ರು -ಕಾಯರ್ಪಾಡಿ ಸೇವಾ  ಪ್ರತಿನಿಧಿ ಸರೋಜ   ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.