ರುಡ್‌ಸೆಟ್ ಅಧಿಕಾರಿ-ನಿರ್ದೇಶಕರ ವಾರ್ಷಿಕ ಕಾರ್‍ಯಾಗಾರ

ಉಜಿರೆ : ಇಲ್ಲಿಯ ಧರ್ಮಸ್ಥಳದ ಶ್ರೀನಿಧಿ  ಅತಿಥಿಗೃಹದಲ್ಲಿ ರುಡ್‌ಸೆಟ್ ಅಧಿಕಾರಿ ಸಿಬ್ಬಂದಿಗಳ ವಾರ್ಷಿಕ ಕಾರ್‍ಯಾಗಾರವು ಸೆ.19 ರಂದು ನಡೆಯಿತು.
ಕಾರ್ಯಕ್ರಮವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರಿನ ಎಂ.ಆರ್.ಪಿ.ಎಲ್ ಆಡಳಿತ ನಿರ್ದೇಶಕ ಎಂ ವೆಂಕಟೇಶ್,ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಸಾಯಿರಾಂ ಹೆಗ್ಡೆ, ಕೆನರಾ ಬ್ಯಾಂಕಿನ ಡಿ.ಜಿ.ಎಂ ಅನ್ಬುಕ್ಕರಸು, ಉಪಸ್ಥಿತರಿದ್ದರು.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರಿಯ ಆಡಳಿತ ಸಮಿತಿಯ ಕಾರ್‍ಯನಿರ್ವಾಹಕ ನಿರ್ದೇಶಕ ಎಂ.ಜನಾರ್ದನ್, ಸ್ವಾಗತಿಸಿ ನಿರ್ದೇಶಕ ವಿನಯ್‌ಕುಮಾರ್ ವಂದಿಸಿದರು. ಹಿರಿಯ ಉಪನ್ಯಾಸಕಿ ಅನುಸೂಯಾ ನಿರೂಪಿಸಿದರು.
ರುಡ್‌ಸೆಟ್ ತರಬೇತಿಯಿಂದ ಯಶಸ್ವಿ ಉದ್ಯಮಿಗಳಾದ ಗದಗದ ಸಾವಿತ್ರಿ, ಕೊಣ್ಣೂರಿನ ಪ್ರಿಯಾ, ಮಧುರೈನ ದುರ್ಗಾ ಮತ್ತು ಉಜಿರೆಯ ಜೀವನ್ ತಮ್ಮ ಸಾಧನೆಯ ಯಶೋಗಾಥೆಯನ್ನು ವಿವರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.