ಟನ್‌ಗಟ್ಟಲೆ ಅಕ್ರಮ ಮರಳು ದಾಸ್ತಾನು ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾರಿ ಸಹಿತ ಎಲ್ಲಾ ಮರಳು ಸರಕಾರ ಮುಟ್ಟುಗೋಲು

ಕಕ್ಕಿಂಜೆ: ಚಾರ್ಮಾಡಿ ಭಾಗದಲ್ಲಿ ಇತ್ತೀಚೆಗೆ ಉಂಟಾಗಿರುವ ನೆರೆ ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಕೃಷಿಭೂಮಿಯಲ್ಲಿ ಅತೀ ಹೆಚ್ಚು ಮರಳು ಬಂದು ಬಿದ್ದಿದ್ದು, ಈ ಭಾಗದಿಂದ ಅಕ್ರಮವಾಗಿ ಲಾರಿಯಲ್ಲಿ ಮರಳು ಸಾಗಾಟ ಮಾಡಿ ಅದನ್ನು ಸ್ಥಳೀಯವಾಗಿ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಟ್ಟಿದ್ದ ಟನ್‌ಗಟ್ಟಲೆ ಮರಳನ್ನು ಗಣಿ ಇಲಾಖೆ ಮತ್ತು ತಹಶೀಲ್ದಾರರ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡ ವಿದ್ಯಮಾನ ನಡೆದಿದೆ.


ಖಚಿತ ಮಾಹಿತಿ ಮೇರೆಗೆ ಗಣಿ ಇಲಾಖೆಯ ಅಧಿಕಾರಿ ಸುಷ್ಮಾ ಅವರು ಖಾಸಗಿ ವಾಹನದಲ್ಲಿ ಈ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಇದೇ ದಾರಿ ಮೂಲಕ ಬಂದ ಕೆ.ಎಲ್17 .ಡಿ. 6116 ಸಂಖ್ಯೆಯ ಮಿನಿಲಾರಿಯನ್ನು
ಎರಡು ಬಾರಿ ತಡೆದಾಗಲೂ ಅವರು ಸೂಚನೆ ಮೀರಿ ಮುನ್ನಡೆದಾಗ ಅದನ್ನು ಬೆನ್ನಟ್ಟಿ ಈ ಪತ್ತೆ ಕಾರ್ಯ ಮಾಡಿದ್ದಾರೆ. ಸ್ಥಳದಿಂದ ಕಾಲ್ಕಿತ್ತ ಮಿನಿಲಾರಿಯನ್ನು ಅದರ ಚಾಲಕ ಒಳರಸ್ತೆಯಲ್ಲಿ ಓಡಿ ಕಣ್ತಪ್ಪಿಸಲು ನಡೆಸಿದ ಪ್ರಯತ್ನ ಸಫಲವಾಗದೇ, ಅದನ್ನು ಬೆನ್ನತ್ತಿ ಹೋದ ಅಧಿಕಾರಿಗಳಿಗೆ ಲೋಡುಗಟ್ಟಲೆ ಮರಳನ್ನು ಅಕ್ರಮವಾಗಿ ದಾಸ್ತಾನಿರಿಸಿದ ಸ್ಥಳ ಪತ್ತೆಯಾಗಿತ್ತು. ಇದೀಗ ಅಧಿಕಾರಿಗಳು ಸದ್ರಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ದಾಸ್ತಾನಿರಿಸಿದ ಎಲ್ಲಾ ಮರಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆ ಅಧಿಕಾರಿ ಪದ್ಮಶ್ರೀ ಅವರ ಮಾರ್ಗದರ್ಶ ನದಂತೆ ಕಾರ್ಯಾಚರಣೆ ನಡೆಸಿದ ಇಲಾಖೆ ಅಧಿಕಾರಿ ಸುಷ್ಮಾ ಅವರು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರ ಸಹಕಾರ ಪಡೆದು ಅಂದೇ ತಡರಾತ್ರಿವರೆಗೂ ಸ್ಥಳದಲ್ಲಿದ್ದು, ವಶಪಡಿಸಿಕೊಂಡ ಮರಳನ್ನು ಸಂಪೂರ್ಣ ವಾಗಿ ಸ್ಥಳದಿಂದ ಖಾಲಿ ಮಾಡಿಸಿ ಚಾರ್ಮಾಡಿ ಪಂಚಾಯತ್ ಕಚೇರಿ ಆವರಣದಲ್ಲಿ ಸಂರಕ್ಷಿಸುವ ಕೆಲಸ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.