ಅಂತಾರಾಷ್ಟ್ರೀಯ ವಾಹನ ಚಾಲಕರ ದಿನಾಚರಣೆ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಬೆಳ್ತಂಗಡಿ: ಮಹಾವೀರ ಸರ್ವಿಸ್ ಸ್ಟೇಷನ್ ಹಳೆಕೋಟೆ ಬೆಳ್ತಂಗಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇವರ ನೇತೃತ್ವದಲ್ಲಿ, ಬಂಟ್ವಾಳ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ಡಾ| ಶ್ರೀಪತಿ ಕಾಮತ್ ರವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಶ್ರೀ ಶಾರದಾ ಒಪ್ಟಿಕಲ್ಸ್ ಇವರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ವಾಹನ ಚಾಲಕರ ದಿನಾಚರಣೆಯ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ  ಇತ್ತೀಚೆಗೆ    ಬೆಳ್ತಂಗಡಿ ಹಳೆಕೋಟೆ ಮಹಾವೀರ ಸ್ಟೇಷನ್(ಪೆಟ್ರೋಲ್ ಪಂಪ್) ನಲ್ಲಿ ಜರುಗಿತು.
ಸುಮಾರು 130 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕನ್ನಡಕದ ಫ್ರೇಮ್ ಖರೀದಿಸಿದವರಿಗೆ ಗ್ಲಾಸ್(ಲೆನ್ಸ್) ಉಚಿತವಾಗಿ ನೀಡಲಾಯಿತು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಡಾ| ಶ್ರೀಪತಿ ಕಾಮತ್, ಬೆಳ್ತಂಗಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮಹಾವೀರ ಸರ್ವಿಸ್ ಸ್ಟೇಷನ್‌ನ ಶೈಲೇಂದ್ರ ಕುಮಾರ್, ಬೆಳ್ತಂಗಡಿ ಶ್ರೀ ಶಾರದಾ ಒಪ್ಟಿಕಲ್ಸ್ ಮಾಲಕ ವಿಲಿಯಂ ಹಾಗೂ ಮಹಾವೀರ ಸರ್ವಿಸ್ ಸ್ಟೇಷನ್‌ನ ಸಿಬ್ಬಂದಿವರ್ಗ, ಮಹೇಂದ್ರ ಸರ್ವಿಸ್‌ನ ಹರ್ಷಕುಮಾರ್ ಉಪಸ್ಥಿತರಿದ್ದರು. ಎಲ್ಲಾ ವಾಹನ ಚಾಲಕರು ಹಾಗೂ ನಿರ್ವಾಹಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.