ತೋಟತ್ತಾಡಿ ವ್ಯಕ್ತಿ ಆತ್ಮಹತ್ಯೆ: ಪ್ರಕರಣಕ್ಕೆ ಹೊಸ ತಿರುವು

ಬೆಳ್ತಂಗಡಿ : ತೋಟತ್ತಾಡಿ ಗ್ರಾಮದ ಜೀಪು ಚಾಲಕ ಜಿಜಿ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು ಬಡ್ಡಿಗೆ ನೀಡಿದ್ದ ಹಣವನ್ನು ಹಿಂತಿರುಗಿಸಲಿಲ್ಲ ಎಂದು ಅಣಿಯೂರು ಪೇಟೆಯಲ್ಲಿ ಜಿಜುವನ್ನು ಬಡ್ಡಿ ದಂಧೆಯವರು ಅವಮಾನ ಮಾಡಿ ಅವರ ಜೀಪನ್ನು ಬಲವಂತವಾಗಿ ಕಸಿದುಕೊಂಡು ಹೋಗಿದ್ದು ಇದರಿಂದ ಅವಮಾನ ತಾಳಲಾರದೆ ಜೀಜು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಮೃತರ ಪುತ್ರ ಜಿಲ್ಸನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಸೆ.12 ರಂದು ಜಿಜು ಅವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಸ್ಥಳೀಯವಾಗಿ ಬಡ್ಡಿದಂಧೆ ನಡೆಸುತ್ತಿರುವವರೇ ತನ್ನ ತಂದೆಯ ಸಾವಿಗೆ ಕಾರಣ ಎಂದು ಜಿಜು ಅವರ ಪುತ್ರ ದೂರಿನಲ್ಲಿ ಆರೋಪಿಸಿದ್ದಾರೆ.
ನೆರಿಯ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬಡ್ಡಿ ದಂಧೆ ನಡೆಯುತ್ತಿರುವ ಕುರಿತು ಈಗಾಗಲೇ ಆರೋಪಗಳು ಕೇಳಿ ಬರುತ್ತಿತ್ತು. ಇದೀಗ ಸರಕಾರ ಜಾರಿಗೆ ತಂದಿರುವ ಹೊಸ ಕಾಯಿದೆಯಿಂದಾಗಿ ಬಡ್ಡಿ ವ್ಯವಹಾರ ಮಾಡುತ್ತಿರುವವರು ತ್ವರಿತವಾಗಿ ಬಡ್ಡಿ ವಸೂಲು ಕಾರ್ಯಕ್ಕೆ ಮುಂದಾಗಿದ್ದು ಇದೇ ಕಾರಣಕ್ಕೆ ಬಡ್ಡಿಗೆ ಹಣ ನೀಡಿದ್ದವರು ಜಿಜಿಯ ಜೀಪನ್ನು ವಶಕ್ಕೆ ಪಡೆದು ಹಣಕ್ಕಾಗಿ ಪೀಡಿಸಿದ್ದರು ಎಂದು ಹೇಳಲಾಗಿದೆ.
ಇದೀಗ ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ಬಡ್ಡಿ ದಂಧೆಯ ಕುರಿತು ತನಿಖೆಯನ್ನು ಆರಂಭಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.