HomePage_Banner_
HomePage_Banner_
HomePage_Banner_

ಗುರುದೇವ ಪದವಿ ಕಾಲೇಜು ಪ್ರಾಂಶುಪಾಲ ಡಾ| ಮೋಹನ್ ಗೌಡ ನಿಧನ

ಬೆಳ್ತಂಗಡಿ : ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಮೋಹನ್‌ಗೌಡ (44.ವ) ಅವರು ಸೆ.16ರಂದು ಹೃದಯಾಘಾತದಿಂದ  ಉಜಿರೆಯ  ಖಾಸಗಿ ಆಸ್ಪತ್ರೆಯಲ್ಲಿ   ಕೊನೆಯುಸಿರೆಳೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ  ಡೆಚ್ಚಾರು ಹೊಸಮನೆ ನಿವಾಸಿಯಾದ ಮೋಹನ್ ಗೌಡ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಉಜಿರೆ ಬೆನಕ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ದಾರಿ ಮಧ್ಯೆ ಅಸುನೀಗಿದರು.
ಮೃತರು  ತಾಯಿ ದೇವಕಿ, ಪತ್ನಿ ಪೂರ್ಣಿಮಾ, ಪುತ್ರ ವೈಭವ್, ಪುತ್ರಿ ಮಾನ್ಯ, ಸಹೋದರ ಉಮೇಶ್ ಗೌಡ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.