ಅಧಿಕೃತ ಪ್ರೀಮಿಯಂ ಕಲೆಕ್ಷನ್ ಸೆಂಟರ್ ಇನ್ಶೂರೆನ್ಸ್ ಸೇವಾ ಕೇಂದ್ರ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಅನುರಾಗ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಇನ್ಶೂರೆನ್ಸ್ ಸೇವಾ ಕೇಂದ್ರವು ನಗರ ಪಂಚಾಯತ್ ಬಳಿ, ಮಿನಿ ವಿಧಾನ ಸೌಧದ ಎದುರು ಕಾರ್ಪೋರೇಷನ್ ಬ್ಯಾಂಕ್ ಹತ್ತಿರ ಮಂಜುಭಾರತಿ ಆರ್ಕೆಡ್‌ಗೆ ಸೆ.16 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.   

ಬೆಳ್ತಂಗಡಿ ಭಾರತೀಯ ಜೀವ ವಿಮಾ ನಿಗಮದ ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಯ್ಕ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಇಂದಬೆಟ್ಟು ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರು ವಂ.ಫಾ| ಸ್ಟೀಫನ್ ಡಿಸೋಜಾ ದೀಪ ಬೆಳಗಿಸಿ ಆಶೀರ್ವಚನಗೈದರು.
ಈ ಸಂದರ್ಭದಲ್ಲಿ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ನಿವೃತ್ತ ಅಧಿಕಾರಿ ಶೇಕ್‌ಕುಂಞಿ, ಅಸಿಸ್ಟೆಂಟ್ ಮ್ಯಾನೇಜರ್ ಅಶೋಕ್, ಶಾಖಾ ವ್ಯವಸ್ಥಾಪಕಿ ಮೋಹಿನಿ ಉಪಸ್ಥಿತರಿದ್ದು ಶುಭಹಾರೈಸಿದರು.
ಇಲ್ಲಿ ಎಲ್‌ಐಸಿ ಪ್ರೀಮಿಯಂ, ಯುನೈಟೆಡ್ ಇಂಡಿಯ ಇನ್ಶೂರೆನ್ಸ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ಜೆರಾಕ್ಸ್, ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಇ-ಮೇಲ್, ಲ್ಯಾಮಿನೇಷನ್, ಆರ್‌ಟಿಸಿ, ಪಾನ್‌ಕಾರ್ಡ್ ಸೌಲಭ್ಯವಿದೆ ಎಂದು ಮಾಲಕ ಫ್ರೆಡ್ರಿಕ್ ರೊಡ್ರಿಗಸ್ ತಿಳಿಸಿದರು. ಫ್ರಾನ್ಸಿಸ್ ಮೋರಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.