ಪುಂಜಾಲಕಟ್ಟೆ ಕಳ್ಳತನ: ಆರೋಪಿಯ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ : ಇಲ್ಲಿಯ ಪಿಲಾತಬೆಟ್ಟು ಗ್ರಾಮದ ನಿವಾಸಿ ಅಂಜಲಿ ಮಸ್ಕರೇನಸ್ ಎಂಬವರ ಮನೆಯಿಂದ ಸುಮಾರು 51 ಗ್ರಾಂ ತೂಕದ ಚಿನ್ನಾಭರಣಗಳು ಸೆ.11 ರಂದು ಕಳವಾಗಿದ್ದು, ಕಳ್ಳತನಗೈದ ಆರೋಪಿಯನ್ನು ಬೆಳ್ತಂಗಡಿ  ಸರ್ಕಲ್  ಇನ್ಸೆಪೆಕ್ಟರ್  ಸಂದೇಶ್ ಅವರ ನೇತೃತ್ವದಲ್ಲಿ  ಪುಂಜಾಲಕಟ್ಟೆ  ಠಾಣಾ  ಎಸ್.ಐ  ಸೌಮ್ಯ.ಜೆ  ಹಾಗೂ ಸಿಬ್ಬಂದಿಗಳು ಬಂಧಿಸಿದ ಘಟನೆ ವರದಿಯಾಗಿದೆ.
ಆರೋಪಿ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮ ನಿವಾಸಿ ವಿಕೇಶ್ ಕುಮಾರ್  (23.ವ) ಇವರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿ, ಕಳವು ಮಾಡಿದ ಚಿನ್ನಾಭರಣಗಳಲ್ಲಿ ಒಟ್ಟು ರೂ 1,17,100 ಮೌಲ್ಯದ 39.85 ಗ್ರಾಂ ತೂಕದ ಚಿನ್ನ ಮತ್ತು ಒಟ್ಟು ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆ.11ರಂದು ಪಿಲಾತಬೆಟ್ಟು ನಿವಾಸಿ ಅಂಜಲಿ ಮಸ್ಕರೇನಸ್ ರವರ ಮನೆಯಲ್ಲಿ ಕಳ್ಳತನವಾಗಿದ್ದು, ಅವರು ಈ ಬಗ್ಗೆ ಪುಂಜಾಲಕಟ್ಟೆ ಪೊಲಿಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪುಂಜಾಲಕಟ್ಟೆ ಪೊಲೀಸರು ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ಕಳವುಗೈದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.