ಧರ್ಮಸ್ಥಳ: ಭಜನಾ ತರಬೇತಿ ಶಿಬಿರ ಉದ್ಘಾಟನೆ

 

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವತಿಯಿಂದ 21ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನಾ ಕಾರ್ಯಗಾರವು   ಸೆ.16ರಿಂದ 22ರ ವರೆಗೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಲಿದ್ದು ,ಇದರ ಉದ್ಘಾಟನಾ ಸಮಾರಂಭವು ಇಂದು( ಸೆ.16) ಜರುಗಿತು.

 

ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಧರ್ಮದರ್ಶಿಗಳಾದ  ಕೆ. ಸೂರ್ಯನಾರಾಯಣ ಉಪಾಧ್ಯಾಯ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಶುಭ ಹಾರೈಸಿದರು.  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು.
ಮಾಣಿಲ ಶ್ರೀಧಾಮದ  ಶ್ರೀ ಮೋಹನ್‌ದಾಸ ಸ್ವಾಮೀಜಿ,  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಉಪಾಧ್ಯಕ್ಷರಾದ ಹೇಮಾವತಿ ವಿ. ಹೆಗ್ಗಡೆಯವರು , ಡಿ.ಹರ್ಷೇಂದ್ರ ಕುಮಾರ್‌  ಹಾಗೂ ಸುಪ್ರಿಯಾ ಹರ್ಷೇಂದ್ರ ಗೌರವ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಖ್ಯಾತ ಗಾಯಕ ಶಂಕರ್ ಶ್ಯಾನುಭಾಗ್, ಮೈಸೂರಿನ ಭಜನಾ ತರಬೇತುದಾರ ರಾಜೇಶ್ ಪಡಿಯಾರ್, ಕಾಸರಗೋಡಿನ ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ , ಮಣಿಪಾಲದ ಸಂಗೀತ ವಿದ್ವಾನ್ ಉಷಾ ಹೆಬ್ಬಾರ್ , ಮನೋರಮಾ ತೋಳ್ಪಾಡಿತ್ತಾಯ ಧರ್ಮಸ್ಥಳ, ಅನಸೂಯ ಪಾಠಕ್ ಉಜಿರೆ, ದೇವದಾಸ ಪ್ರಭು ಬಂಟ್ವಾಳ, ಶಂಕರ್ ಉಡುಪಿ, ರಮೇಶ್ ಕಲ್ಮಾಡಿ ಉಡುಪಿ, ಮಂಗಲದಾಸ ಗುಲ್ವಾಡಿ ಮಂಗಳೂರು, ಮೋಹನ್‌ದಾಸ್ ಶೆಣೈ ಮಂಗಳೂರು, ಎಂ.ನಾಗೇಶ್ ಶೆಣೈ ಮಂಗಳೂರು ಭಾಗವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಅಧ್ಯಕ್ಷ ಬಾಲಕೃಷ್ಣ ಪಂಜ, ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಮಮತಾ ರಾವ್ ಹಾಗೂ ಪರಿಷತ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.