ಶಿರ್ಲಾಲು: ಗುರುಪೂಜೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

ಶಿರ್ಲಾಲು  : ಬ್ರಹ್ಮಶ್ರೀ ನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಮಹಿಳಾ ವೇದಿಕೆ,ಯುವ ಬಿಲ್ಲವ ವೇದಿಕೆ, ಯುವ ವಾಹಿನಿ ಶಿರ್ಲಾಲು ಇದರ ಆಶ್ರಯದಲ್ಲಿ ಗುರುಪೂಜೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಇಂದು(ಸೆ.14) ಶಿರ್ಲಾಲು ನವೋದಯ ಸಭಾಭವನದಲ್ಲಿ ಜರುಗಿತು.
ಕೇರಳದ ಶಿವಗಿರಿ ಮಠ  ಸ್ವಾಮೀಜಿ  ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಆರ್ಶೀವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ಲಾಲು ಶ್ರೀ ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಗು.ನಾ.ಸ್ವಾ.ಸೇ ಸಂಘದ ನಿರ್ದೇಶಕಿ ಶಾಂಭವಿ.ವಿ ಬಂಗೇರ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷ ಹರೀಶ್ , ಯುವವಾಹಿನಿ ಅಧ್ಯಕ್ಷ ಜ್ಞಾನೇಶ್ ಕಟ್ಟ, ಯುಬಿಲ್ಲವ ವೇದಿಕೆ ಅಧ್ಯಕ್ಷ ನವೀನ್ ಕಟ್ರಬೈಲು ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಗೀತಾ  ಪಾರ್ಲೊಡಿ   ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.