HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೇಸಿಐ ಬೆಳ್ತಂಗಡಿ : ಮಂಜುಶ್ರೀ ವತಿಯಿಂದ ವಲಯಾಧ್ಯಕ್ಷರ ಅಧಿಕೃತ ಭೇಟಿ

ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮವು ಸೆ.13 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಅಶೋಕ್ ಚುಂತಾರ್,ಪ್ರಗತಿಪರ ಕೃಷಿಕ ಜಗದೀಶ್ ರೈ ಪಾಂಡ್ಯಿಟ್ಟು ಬಳಂಜ ಇವರನ್ನು ಸನ್ಮಾನಿಸಲಾಯಿತು. ವ್ಯವಹಾರ ವಿಭಾಗದ ನಿರ್ದೇಶಕ ಚಿದಾನಂದ ಇಡ್ಯ ದಂಪತಿಗಳನ್ನು ಹಾಗೂ ಜೇಸಿ ಅಧ್ಯಕ್ಷ ಪ್ರಶಾಂತ್ ಲಾಯಿಲ ದಂಪತಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ರೋಯನ್ ಕ್ರಾಸ್ತಾ, ಆಡಳಿತ ವಿಭಾಗದ ನಿರ್ದೇಶಕ ಪ್ರಶಾಂತ್ ರೈ, ನಿಕಟಪೂರ್ವಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಶಿರ್ಲಾಲು, ಕಾರ್ಯಕ್ರಮ ಸಂಯೋಜಕ ರಂಜಿತ್ ಹೆಚ್.ಡಿ, ಜೇಸಿರೆಟ್ ಅಧ್ಯಕ್ಷೆ ಆಶಾ ಪ್ರಶಾಂತ್, ಜೂನಿಯರ್ ಜೇಸಿ ಅಧ್ಯಕ್ಷ ವಿನಾಯಕ ಪ್ರಸಾದ್, ಸುದ್ದಿ ಬಿಡುಗಡೆ ವಾರ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ್ ರೈ, ಪೂರ್ವಾಧ್ಯಕ್ಷ ಅಶೋಕ್ ಕುಮಾರ್ ಬಿ.ಪಿ, ಜಗದೀಶ್.ಡಿ, ದಯಾನಂದ್ ನಾಯಕ್, ಸಂತೋಷ್ ಕುಮಾರ್ ಕಾಪಿನಡ್ಕ, ರವೀಂದ್ರ ಶೆಟ್ಟಿ ಬಳಂಜ, ಕೇಶವ ಪೈ, ಶ್ರೀನಾಥ್ ಕೆ.ಎಂ, ವಸಂತ ಶೆಟ್ಟಿ ಶ್ರದ್ಧಾ, ಸಂತೋಷ್.ಪಿ ಕೋಟ್ಯಾನ್ ಬಳಂಜ, ಜೇಸಿರಟ್ ಪೂರ್ವಾಧ್ಯಕ್ಷರಾದ ಪವಿತ್ರ ಚಿದಾನಂದ, ಅಮೃತ .ಎಸ್.ಕೋಟ್ಯಾನ್ ಹಾಗೂ ಜೇಸಿಐನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ  ಸಂದರ್ಭದಲ್ಲಿ ಚಿದಾನಂದ ಇಡ್ಯ ಅವರ ಪುತ್ರ ಚಿರಾಯು, ಜೇಸಿಐ ಉಪಾಧ್ಯಕ್ಷ ವಿಶಾಲ್ ಅಗಸ್ಟಿನ್, ಜೇಸಿರೇಟ್ ಅಧ್ಯಕ್ಷೆ ಆಶಾ ಪ್ರಶಾಂತ್ ಇವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.