ಉಜಿರೆ: ಶೋರಿನ್ ರ್ಯೂ ಕರಾಟೆ ಅಸೊಸಿಯೇಶನ್ ಮೂಡಬಿದ್ರೆ ಇದರ ವತಿಯಿಂದ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾಟದಲ್ಲಿ ಉಜಿರೆಯ ನಾಗರಾಜ್ ಭಾಗವಹಿಸಿ, ಗ್ರ್ಯಾಂಡ್ ಚಾಂಪಿಯನ್ ಶಿಪ್ನಲ್ಲಿ ದ್ವಿತೀಯ ಹಾಗೂ ಬ್ಲ್ಯಾಕ್ ಬೆಲ್ಟ್ ವಿಭಾಗದ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಇವರು ಉಜಿರೆ ಹಳೆಪೇಟೆ ನಿವಾಸಿ ಶೇಖರ ಶೆಟ್ಟಿ ಮತ್ತು ಜಯಂತಿ ದಂಪತಿ ಪುತ್ರ ಹಾಗೂ ಇವರಿಗೆ ಸೆನ್ಸಾಯಿ ನದೀಮ್ ಹಾಗೂ ಸೆನ್ಸಾಯಿ ಅಬ್ದುಲ್ ರೆಹೆಮಾನ್ ರವರು ತರಬೇತಿ ನೀಡಿರುತ್ತಾರೆ.