ದೇವಸ್ಥಾನದ ಆಸ್ತಿಪಾಸ್ತಿ ರಕ್ಷಣೆಗೆ ಶೀಘ್ರದಲ್ಲೇ ಸರ್ವೇ ತಂಡ ರಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಜರಾಹಿ ವ್ಯಾಪ್ತಿಯ ದೇವಸ್ಥಾನಗಳ ಆಸ್ತಿಪಾಸ್ತಿ ಒತ್ತುವರಿ ಪತ್ತೆಹಚ್ಚಿ ಅವುಗಳನ್ನು ತೆರವುಗೊಳಿಸಿ ಸಂರಕ್ಷಿಸುವ ಸಲುವಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ವೇ ತಂಡಗಳನ್ನು ತಿಂಗಳಲ್ಲಿ ರಚಿಸಲಾಗುವುದು ಎಂದು ಮುಜರಾಹಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ವಿಕಾಸಸೌಧದಲ್ಲಿ ಇಲಾಖಾ ಪರಿಶೀಲನೆ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತರ ಇಲಾಖೆಗಳಿಂದ ಎರವಲು ಸೇವೆ ಮೇಲೆ ಅಧಿಕಾರಿಗಳ ನಿಯೋಜನೆ ಸಹಿತ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ವೇ ತಂಡಗಳನ್ನು ರಚಿಸಲಾಗುವುದು ಎಂದರು.
ಯಾರ ವಿರುದ್ಧವಾಗಿಯೂ ಸರ್ವೇ ತಂಡಗಳನ್ನು ರಚಿಸುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಭೂ ದಾಖಲೆ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಸರ್ವೇ ತಂಡ ಕಾರ್ಯ ನಿರ್ವಹಿಸಲಿದೆ. ಎಂದು ಹೇಳಿದರು.
15  ದಿನಗಳಲ್ಲಿ ಧಾರ್ಮಿಕ ಪರಿಷತ್ ರಚನೆ
ಮುಂದಿನ 15  ದಿನಗಳಲ್ಲಿ ರಾಜ್ಯ ಧಾರ್ಮಿಕ ಪರಿಷತ್ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಬಳಿಕ 30 ಜಿಲ್ಲೆಗಳಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್‌ನ ನೇತೃತ್ವವನ್ನು ಜಿಲ್ಲಾಧಿಕಾರಿಗಳು ವಹಿಸಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಮೂಲಕ ರಾಜ್ಯದ ಬಿ ಮತ್ತು ಸಿ ವರ್ಗದ ದೇವಾಲಯಗಳಿಗೆ ವ್ಯವಸ್ಥಾಪನ ಸಮಿತಿ ರಚಿಸಲಾಗುವುದು. ಆ ಸಮಿತಿಯ ಸದಸ್ಯರಿಗೆ ಕಾರ್ಯಾಗಾರದ ಮೂಲಕ ದೇವಸ್ಥಾನ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುವುದು. ಇದರಿಂದ ಎಲ್ಲ ದೇವಾಲಯಗಳಲ್ಲಿ ವ್ಯವಸ್ಥಿತ ಆಡಳಿತಕ್ಕೆ ಚಾಲನೆ ದೊರೆತು ಶುಚಿತ್ವ ಮತ್ತಿತರ ವ್ಯವಸ್ಥೆಗೆ ಒತ್ತು ಸಿಗಲಿದೆ ಎಂದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.