HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಚಾರ್ಮಾಡಿ : ಅಕ್ಟೋಬರ್ ಅಂತ್ಯದೊಳಗೆ ರಸ್ತೆ ದುರಸ್ತಿಗೊಳಿಸಲು ನಳಿನ್ ಕುಮಾರ್ ಆದೇಶ

ಹದಗೆಟ್ಟಿರುವ ರಾಷ್ಟ್ರೀಯ/ರಾಜ್ಯ ಹೆದ್ದಾರಿಗಳು, ಘಾಟಿ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ.
ದ.ಕ ಜಿ.ಪಂ ಸಭಾಂಗಣದಲ್ಲಿ ಸೆ.೧೨ರಂದು ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಂತ್ರಿಕ ಅಥವಾ ಆರ್ಥಿಕ ನೆಪ ಹೇಳಿ ಕಾಮಗಾರಿ ವಿಳಂಬವಾಗಬಾರದು. ಕೇಂದ್ರ ಮಾತ್ರವಲ್ಲ ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಅವಶ್ಯವಿದ್ದರೆ ಗಮನಕ್ಕೆ ತರಬೇಕು ಅನುದಾನ ಒದಗಿಸಲಾಗುವುದು ಎಂದರು.  ಚಾರ್ಮಾಡಿಯಲ್ಲಿ 33  ಕಡೆ ಭೂಕುಸಿತವಾಗಿದ್ದು ದುರಸ್ತಿ ನಡೆದಿದೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಹೆದ್ದಾರಿ ಇಲಾಖೆ ಶಿಘಾರಸ್ಸು ಮಾಡಿದೆ. ಚಿಕ್ಕಮಗಳೂರು ಎಸ್.ಪಿ ಇನ್ನೂ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
15  ದಿನಗಳೊಳಗೆ ಸಭೆ
ಶಿರಾಡಿ,ಚಾರ್ಮಾಡಿ ಮತ್ತು ಸಂಪಾಜೆ ಘಾಟಿಗಳಲ್ಲಿ ಭೂಕುಸಿತದಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವುದನ್ನು ಸಿ.ಎಂ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ 15 ದಿನಗಳೊಳಗೆ ಸಭೆ ನಡೆಸಿ ಸೂಕ್ತ ಪರಿಹಾರಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ ಎಮದು ನಳಿನ್ ಕುಮಾರ್ ಕಟೀಲ್ ಹೇಳಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.