HomePage_Banner_
HomePage_Banner_
HomePage_Banner_

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಶಿಕ್ಷೆ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಗೆ ಲೈಂಗಿಕ  ದೌರ್ಜನ್ಯ ಎಸಗಿದ ಆರೋಪದಡಿ ನಿಡ್ಲೆ ಗ್ರಾಮದ ನಿವಾಸಿ ಶೇಖರ ನಲಿಕೆ (45.ವ) ಮಂಗಳೂರಿನ 2ನೇ ಹೆಚ್ಚುವರಿ ನ್ಯಾಯಾಲಯವು 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.
ಘಟನೆಯ ವಿವರ : ಆರೋಪಿ ಶೇಖರ ನಲಿಕೆ ನಾಟಿ ವೈದ್ಯರಾಗಿದ್ದು ಮೇ.28 2016 ರಂದು ಅದೇ ಊರಿನ ವ್ಯಕ್ತಿಯೊಬ್ಬರನ್ನು ಆತನ ಪತ್ನಿ ಮತ್ತು 13  ವರ್ಷದ ಪುತ್ರಿ ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಬಾಲಕಿಯನ್ನು ನೋಡಿದ ಶೇಖರ ನಲಿಕೆ ಆಕೆಗೆ ಸೋಂಕು ಇದೆ ತಾಯತ ಕಟ್ಟಬೇಕು ನೀವು ಹೊರಗೆ ಹೋಗಿ ಎಂದು ಹೆತ್ತವರನ್ನು ಹೊರಗೆ ಕಳುಹಿಸಿದ್ದ ಈ ಸಂದರ್ಭ ಆತನು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಹೆತ್ತವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪೋಕ್ಸೊ ಕಾಯ್ದೆಯಡಿ ಅದೇ ದಿನ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಬೆಳ್ತಂಗಡಿ ಸಿಐ ನೇಮಿರಾಜು ಅವರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ ೨ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್ ಪಲ್ಲವಿ ಅವರು ವಿಚಾರಣೆ ನಡೆಸಿ ಬಾಲಕಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ ದಂಡದ ಮೊತ್ತದಲ್ಲಿ 9 ಸಾವಿರ ರೂ.ಗಳನ್ನು ಬಾಲಕಿಗೆ ನೀಡುವಂತೆ ಆದೇಶಿಸಿದರು.ಸರಕಾರದ ಪರವಾಗಿ ವಿಶೇಷ ಅಭಿಯೋಜಕ ವೆಂಕಟರಮಣ ಸ್ವಾಮಿ.ಸಿ ವಾದಿಸಿದರು. 12  ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.