ಸಾವ್ಯ: ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸಾವ್ಯ: ಇಲ್ಲಿಯ ಸ.ಉ.ಹಿ.ಪ್ರಾ.ಶಾಲೆ ಸಾವ್ಯದಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಸೆ.4 ರಂದು ನಡೆಯಿತು.
ಉದ್ಘಾಟನೆಯನ್ನು ಅಂಡಿಂಜೆ ಗ್ರಾ.ಪಂ. ಅದ್ಯಕ್ಷ ಮೋಹನ್ ಅಂಡಿಂಜೆ ನೆರವೇರಿಸಿದರು. ದ.ಕ. ಪ್ರಾ.ಶಾ.ಶಿ.ಸಂ. ಅಧ್ಯಕ್ಷ ಶಿವಶಂಕರ್ ಭಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಲೋಕಯ್ಯ ಪೂಜಾರಿ, ಉಪಾಧ್ಯಕ್ಷೆ ಶಾಲಿನಿ ಹೆಗ್ಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ, ಕೊಡುಗೈದಾನಿ ಶ್ರೀಧರ್ ಪೂಜಾರಿ ಭೂತಡ್ಕ, ಗ್ರಾ.ಪಂ ಸದಸ್ಯರಾದ ವಿಠಲ್ ಪೂಜಾರಿ, ನಿರ್ಮಲ ಸಾಂತಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್, ದೈ,ಶಿಕ್ಷಣ-ಶಿಕ್ಷಕ ವಿಜಯ ಕುಮಾರ್ ಅಂಡಿಂಜೆ, ಶುಭಕರ ಸಾವ್ಯ, ಶಾಲಾ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.
ವಾಲಿಬಾಲ್ ಹುಡುಗರ ವಿಭಾಗದಲ್ಲಿ ಸ.ಉ.ಹಿ.ಪ್ರಾ.ಶಾಲೆ ಸಾವ್ಯ ಪ್ರಥಮ, ಸ.ಉ.ಹಿ.ಪ್ರಾ.ಶಾ ಮಾವಿನಕಟ್ಟೆ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ಸ.ಉ.ಪ್ರಾ,ಶಾಲೆ ಸಾವ್ಯ ಪ್ರಥಮ, ಸೈಂಟ್ ಪೀಟರ್ ಅಳದಂಗಡಿ ಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಮುಖ್ಯೋಪಾಧ್ಯಾಯ ಅಬೂಬಕ್ಕರ್ ಸ್ವಾಗತಿಸಿ, ಸಂತೋಷ್ ಕುಮಾರ್ ವಂದಿಸಿ, ಪಂಜು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.