ಉಜಿರೆ: “ಒಂದು ಗ್ರೂಪಿನ ಕಥೆ” ರೂಪಕ ಪ್ರದರ್ಶನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಸಾಮಾಜಿಕ ಜಾಲತಾಣದ ಅರಿವು ಮೂಡಿಸುವ ಕುರಿತು ತೆಲಿಕೆ ನಲಿಕೆ ತಂಡದಿಂದ “ಒಂದು ಗ್ರೂಪಿನ ಕಥೆ” ಎಂಬ ವಿನೂತನ ಶೈಲಿಯ ಕನ್ನಡ ರೂಪಕವನ್ನು ಪ್ರದರ್ಶಿಸಲಾಯಿತು.
ಸಾಮಾಜಿಕ ಜಾಲತಾಣದ ಎಂಬುದು ಪ್ರತಿಭೆ ಅನಾವರಣಕ್ಕೆ ಪ್ರಬುದ್ಧ ವೇದಿಕೆ, ನಾವು ಒಳ್ಳೆಯ ದೃಷ್ಟಿಯಿಂದ ಉಪಯೋಗಿಸಿದರೆ ಒಳಿತು ಆಗುವುದು, ಕೆಟ್ಟ ದೃಷ್ಟಿಯಿಂದ ಉಪಯೋಗಿಸಿದರೆ ಕೆಡುಕು ಆಗುವುದು, ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಎಂಬ ಜಾಗೃತಿಯನ್ನು ರೂಪಕದ ಮೂಲಕ ನೀಡಲಾಯಿತು.
ರೂಪಕದ ಪರಿಕಲ್ಪನೆ ಮತ್ತು ರಚನೆ ಸುರೇಂದ್ರ ಜೈನ್ ನಾರಾವಿ, ನಿರ್ವಹಣೆ ಮತ್ತು ಹಿನ್ನೆಲೆ ಗಾಯನ ಧನರಾಜ್ ನಿಡಿಗಲ್, ಹಿನ್ನೆಲೆ ಧ್ವನಿ ಸುಧೀರ್ ಕೆ.ವಿ., ಗಣೇಶ್ ಶೆಂಡ್ಯೆ, ತುಕಾರಾಮ್ ಸಾಲ್ಯಾನ್, ಸಂಕಲನ ವಿ.ಕೆ. ಕಡಬ, ಸಲಹೆ ಮತ್ತು ಸಹಕಾರ ಸಂದೀಪ್ ಕುಮಾರ್ ಜವಾಬ್ದಾರಿ ನಿರ್ವಹಿಸಿದ್ದರು. ಕಲಾವಿದರಾಗಿ ತುಕಾರಾಮ್ ಸಾಲ್ಯಾನ್, ಸುಧೀರ್ ಕೆ.ವಿ., ಗಣೇಶ್ ಶೆಂಡ್ಯೆ, ದೇವಿಪ್ರಸಾದ್, ಶರತ್ ಚಂದ್ರ, ನಟರಾಜ್, ಅಭಿನಂದನ್, ಸುರೇಂದ್ರ ಜೈನ್, ಧನರಾಜ್, ರಾಜೇಶ್, ಸುರೇಶ್ ಹಾಗೂ ವಿದ್ಯಾರ್ಥಿಗಳಾದ ಪೃಥ್ವೀಶ್, ಸಚಿನ್, ಸೂರಜ್, ಪ್ರತಿಮಾ, ಅಕ್ಷತಾ ಮೊದಲಾದವರು ಅಭಿನಯಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.