ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

ಸಸಿಕಾಂತ್ ಸೆಂಥಿಲ್ ರಾಜೀನಾಮೆ

ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಕೊಟ್ಟಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೆಂಥಿಲ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ದೇಶದ ಕೆಲವೂಂದು ನಿಯಮಾವಳಿಗಳು ದೇಶಕ್ಕೆ ಮಾರಕವಾಗಿದ್ದು ಸರಕಾರದ ಈ ನಿಯಮಗಳಿಗೆ ಹೊಂದಿಕೊಂಡು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದರು. ಇದೀಗ ಕೆಲವರು ಸೆಂಥಿಲ್ ಭ್ರಷ್ಟ ಅಧಿಕಾರಿಯಾಗಿದ್ದು ಮರಳಿನ ವಿಚಾರದಲ್ಲಿ ಅವರದೇ ಆದ ಕೆಲವೊಂದು ನಿಯಾಮವಳಿಗಳನ್ನು ಮಾಡಿದ್ದು ಜಿಲ್ಲೆಯ ಜನತೆಗೆ ದ್ರೋಹ ಮಾಡಿದ್ದಾರೆ.ಎಂದು ದೂರುತ್ತಿದ್ದಾರೆ. ಇನ್ನೂಂದಷ್ಟು ಜನರು ಡಿ.ಸಿಯ ಪರವಾಗಿದ್ದಾರೆ. ಇಂತಹ ನಿಷ್ಠಾವಂತ ಜಿಲ್ಲಾಧಿಕಾರಿಯನ್ನು ಕಳೆದುಕೊಂಡದ್ದು ಜಿಲ್ಲೆಯ ದುರಾದೃಷ್ಟ ಎಂದು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

 

 

                                                                                                                                  ಚಂದ್ರಯಾನ ವಿಫಲಕ್ಕೆ ರಷ್ಯಾ ಕಾರಣ

                                                ಹೀಗೆ ಹೇಳಿದವರು ಮಾಜಿ ಸಚಿವ ಯು.ಟಿ ಖಾದರ್ ಮಾಧ್ಯಮದವರು ಚಂದ್ರಯಾನದ ಕುರಿತು ಕೇಳಿದ ಪ್ರಶ್ನೆಗೆ ಯು.ಟಿ ಖಾದರ್ ಅವರು ಚಂದ್ರಯಾನ ವಿಫಲಕ್ಕೆ ರಷ್ಯಾ ಕಾರಣ ಎಂದಿದ್ದರು. ಇದೀಗ ಜನರು ಮಾಜಿ ಇಸ್ರೋ ವಿಜ್ಞಾನಿ ಯು.ಟಿ ಖಾದರ್ ಎಂದು ಟ್ರೋಲ್ ಮಾಡಿದ್ದು ಸಕತ್ ವೈರಲ್ ಆಗಿದೆ.

 

 

 

ನಾಯಕರಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯಾನಾ….!

ಕೇಂದ್ರ ಸರಕಾರವು ದಂಡದ ಮೊತ್ತವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಈ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ್ದು ಇವರಿಬ್ಬರಿಗೂ ಯಾವುದೇ ರೀತಿಯ ದಂಡವನ್ನು ಪೊಲೀಸರು ವಿಧಿಸದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಳಿನ್ ಕುಮಾರ್ ಹಾಗೂ ಸುನೀಲ್ ಕುಮಾರ್ ಸೀಟ್ ಬೆಲ್ಟ್ ಧರಿಸದೇ ಪೊಲೀಸರ ಎದುರೇ ಕಾರಿನಿಂದ ಇಳಿಯಿತ್ತಿರುವ ವಿಡೀಯೊ ವೈರಲ್ ಆಗಿದ್ದು ನಾಯಕರಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯನಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

 

 

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.