ಅಕ್ರಮ ರೇಷನ್‌ಕಾರ್ಡ್ ಪತ್ತೆಯಾದರೆ ದಂಡ-ಕ್ರಿಮಿನಲ್ ಕೇಸ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಕಲಿ ಕಾರ್ಡ್ ಪತ್ತೆಗೆ ಕ್ರಮ- ಸೆ.30 ಮಾಹಿತಿ ನೀಡಲು ಕೊನೆ

ಬೆಳ್ತಂಗಡಿ: ಬಿಪಿಎಲ್ ಹೊಂದಲು ಅನರ್ಹರಾಗಿರುವ ಕುಟುಂಬಗಳು ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಹಾಗೂ ಇಲಾಖಾ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವುದು ಕಂಡು ಬಂದಿದ್ದು, ಅಕ್ರಮ ಪಡಿತರ ಚೀಟಿಗಳನ್ನು ಹೊಂದಿದ್ದರೆ ಸೆ.30ರ ಒಳಗೆ ವಾಪಸ್ ಮಾಡಬೇಕು, ಇಲ್ಲದಿದ್ದರೆ ಭಾರಿ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ಸರಕಾರ ನೀಡಿದೆ.
ರಾಜ್ಯದಲ್ಲಿ ಕುಟುಂಬ ಸಂಖ್ಯೆಗಿಂತ ಹೆಚ್ಚಿನ ಪಡಿತರ ಚೀಟಿಗಳಿರುವುದು ಮತ್ತು ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವುದು ಪತ್ತೆಯಾಗಿದೆ. ಜೊತೆಗೆ ಪಡಿತರದ ಮೇಲಿನ ವೆಚ್ಚ ತಗ್ಗಿಸಲು ಹಾಗೂ ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಡಿತರ ಚೀಟಿಗಳ ಸಂಖ್ಯೆ ಕಡಿಮೆ ಮಾಡಲು ಸರಕಾರ ಮುಂದಾಗಿದೆ. ಅಕ್ರಮ ಪಡಿತರ ಚೀಟಿ ಹೊಂದಿರುವವರು ನಿಗದಿತ ದಿನದೊಳಗೆ ತಮ್ಮ ಪಡಿತರ ಕಾರ್ಡ್‌ನ್ನು ಹಿಂತಿರುಗಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸರಕಾರ ಕೆಲವು ತಾಲೂಕುಗಳಲ್ಲಿ ಅನರ್ಹ ಕಾರ್ಡ್‌ಗಳನ್ನು ವಾಪಾಸು ಮಾಡಲು ಸೆ.30ರ ಗಡವು ನೀಡಲಾಗಿದೆ. ಇನ್ನೂ ಕೆಲ ತಾಲೂಕುಗಳಲ್ಲಿ ಯಾವುದೇ ಗಡುವು ಇಲ್ಲದೆ ಹಂತ, ಹಂತವಾಗಿ ರದ್ದು ಮಾಡಲಾಗುತ್ತಿದೆ. ಆಧಾರ್ ಹಾಗೂ ಮೊಬೈಲ್ ನಂಬರ್ ಪಡಿತರ ಚೀಟಿ ಲಿಂಕ್ ಮಾಡಿದ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಡ್‌ಗಳು ರದ್ದಾಗಿದೆ. ಅದರ ಪರಿಣಾಮ ಪ್ರತಿ ತಿಂಗಳು ಶೇ.೯ ಪಡಿತರ ಉಳಿತಾಯವಾಗಿದೆ.
ಮನೆಗಳಿಗಿಂತ ಕಾರ್ಡ್‌ಗಳೇ ಹೆಚ್ಚು
2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಇರುವ ಮನೆಗಳ ಸಂಖ್ಯೆಗಿಂತ ಪಡಿತರ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ 13179911 ಮನೆಗಳಿದ್ದರೆ 14545269 ಪಡಿತರ ಕಾರ್ಡ್‌ಗಳಿವೆ. ಒಟ್ಟು49348175  ಫಲಾನುಭವಿಗಳಿದ್ದಾರೆ. ಮನೆಗಳಿಂತ ಹೆಚ್ಚಿರುವ ಕಾರ್ಡ್‌ಗಳನ್ನು ರದ್ದು ಮಾಡಲು ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮೊಬೈಲ್ ಹಾಗೂ ಆಧಾರ್ ಲಿಂಕ್ ಮಾಡಿರುವುದನ್ನೇ ಮಾನದಂಡವಾಗಿ ಪರಿಗಣಿಸಲಾಗಿದೆ. ಮೊದಲ ಹಂತದಲ್ಲಿ ಸರಕಾರಿ, ಅರೆಸರಕಾರಿ ನೌಕರರನ್ನು ಹುಡುಕಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ 1000-1500 ಸರಕಾರಿ, ಅರೆಸರಕಾರಿ ನೌಕರರು ಪಡಿತರ ಚೀಟಿ ಪಡೆದಿರುವುದು ಪತ್ತೆಯಾಗಿದೆ. ವಾಹನ ನೋಂದಣಿಗೆ ಕೊಟ್ಟ ಮೊಬೈಲ್ ಸಂಖ್ಯೆ ಹಾಗೂ ಪಡಿತರ ಚೀಟಿಗೆ ಕೊಟ್ಟ ಸಂಖ್ಯೆಯನ್ನು ಲಿಂಕ್ ಮಾಡುವ ಕೆಲಸವೂ ನಡೆದಿದೆ. ಇದರಿಂದಲೂ ಕೆಲ ಜಿಲ್ಲೆಗಳಲ್ಲಿ 1000ಕ್ಕೂ ಅಧಿಕ ಅಕ್ರಮ ಪಡಿತರ ಕಾರ್ಡ್‌ಗಳು ಪತ್ತೆಯಾಗಿದೆ. ಆದಾಯ ಪ್ರಮಾಣ ಪತ್ರ, ತೆರಿಗೆ ಪಾವತಿಯ ಮಾಹಿತಿಯ ಆಧಾರದಲ್ಲಿ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ಪಡೆಯಲಾಗಿದೆ.

ದಂಡ ಮತ್ತು ಶಿಕ್ಷೆ
ಅಕ್ರಮ ಪಡಿತರ ಕಾರ್ಡ್ ಹೊಂದಿರುವವರ ವಿರುದ್ಧ ಕರ್ನಾಟಕ ಪ್ರೋವೇಶ್ಚನ್ ಆಫ್ ಅನಾತೊರೈಸ್‌ಡ್ ಪೊಸಿಸನ್ ಆಫ್ ರೇಶನ್‌ಕಾರ್ಡ್ ಆರ್ಡರ್ 1977ರ ಅನ್ವಯ ಕ್ರಮ ಜರುಗಿಸುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು. ಜೊತೆಗೆ ಈವರೆಗೆ ಪಡೆದಿರುವ ಅಕ್ಕಿಯನ್ನು ಲೆಕ್ಕ ಮಾಡಿ ಮುಕ್ತಮಾರುಕಟ್ಟೆ ದರ ಅಂದಾಜು ಪ್ರತಿ ಕೆ.ಜಿಗೆ ರೂ.35ರಂತೆ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.