ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖೆ ಉದ್ಘಾಟನೆ

ಪುತ್ತೂರು: ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖೆಯು  ಇಂದು   (ಸೆ.12)  ಬೆಳಿಗ್ಗೆ ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು. ಶಾಖೆಯ ಉದ್ಠಾಟನೆಯನ್ನು ಧರ್ಮಸ್ಥಳದ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ ನೆರವೇರಿಸಿದರು. ಪುತ್ತೂರು ಪರಿವಾರ ಕ್ರೆಡಿಟ್ ಕೋ_ ಆಪರೇಟಿವ್ ಅಧ್ಯಕ್ಷ ಸಂತೋಷ್ ಕುಮಾರ್.ಎ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಕ್ಕಡ ಗ್ರಾ.ಪಂ ಅಧ್ಯಕ್ಷೆ ರಾಧಾ ಬಿ.ಕೆ., ಬೆಳ್ತಂಗಡಿ ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ., ಸೌತಡ್ಕ ಶ್ರೀ ಕ್ಷೇತ್ರ.ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕೊಕ್ಕಡ ಸೈಂಟ್ ಜಾನ್ಸ್ ಚರ್ಚ್‌ನ ಧರ್ಮಗುರು ಜಗದೀಶ್ ಪಿಂಟೋ, ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿ ಧರ್ಮಗುರು ಮಹಮ್ಮದ್ ಇಸ್ಮಾಯಿಲ್ ಹಳ್ಳಿಂಗೇರಿ, ಕೊಕ್ಕಡ ಉದ್ಯಮಿ ಸೀತಾರಾಮ ನಾಕ್ ಎಳ್ಳುಗದ್ದೆ, ಕೊಕ್ಕಡ ವಲಯ ಪರಿವಾರ ಬಂಟರ ಸಂಘದ ಅಧ್ಯಕ್ಷ ಕಿಶೋರ್ ನಾಕ್ ಓಣಿತ್ತಾರು, ಕೊಕ್ಕಡ ಸಿ.ಎ ಬ್ಯಾಂಕ್ ಅಧ್ಯಕ್ಷ ನಾರಾಯಣ ಗೌಡ, ಪಟ್ಟೂರು ಶ್ರೀರಾಮ ಶಾಲೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್ ಮಾಲ್ಹಕ ಫಣಿರಾಜ್ ಜೈನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಕೆ.ಪಿ, ಉಪಾಧ್ಯಕ್ಷ ರಘುನಾಥ್ ನಾಯ್ಕ್, ಶಾಖಾ ವ್ಯವಸ್ಥಾಪಕ ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.