ಕಳಿಯ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಕಳಿಯ : ಇಲ್ಲಿಯ ಕಳಿಯ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮವು ಸೆ.11 ರಂದು ನಡೆಯಿತು.
ಜಿ.ಪಂ.ಸದಸ್ಯೆ ಮಮತಾ ಎಂ.ಶೆಟ್ಟಿಯವರು ಮಾವಿನಕಟ್ಟೆಯಲ್ಲಿ 60 ಮನೆ ನಿವೇಶನದ ಶಂಕು ಸ್ಥಾಪನೆಯನ್ನು ನೆರವೇರಿಸಿದರು. ಖಂಡಿಗ ಎಂಬಲ್ಲಿ ರೂ. 6 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹಿಂದೂ ರುದ್ರಭೂಮಿ ಕಾಮಗಾರಿಗೆ ತಾ.ಪಂ.ಸದಸ್ಯ ಪ್ರವೀಣ್ ಗೌಡ ಶಂಕುಸ್ಥಾಪನೆ ನೆರವೇರಿಸಿದರು. ಕಳಿಯ ಗ್ರಾಮದ ಪದಗೊಳಿ ಎಂಬಲ್ಲಿ ಸುಮಾರು 57 ಮನೆ ನಿವೇಶನದ ಶಂಕುಸ್ಥಾಪನೆಯನ್ನು ಕಳಿಯ ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಅಸ್ಮಾ, ಸದಸ್ಯರಾದ ತುಕರಾಮ ಎಮ್, ಪ್ರದೀಪ್ ಕುಮಾರ್, ಕೆ.ಎಮ್.ಅಬ್ದುಲ್ ಕರೀಂ, ಸುಧಾಕರ, ಎಮ್.ದಿವಾಕರ, ಎಮ್. ವಿಶ್ವನಾಥ ಪೂಜಾರಿ, ವಿಜಯ ಹೆಚ್.ಪ್ರಸಾದ್, ಪ್ರೇಮ, ಪುಷ್ಪ ಬಿ.ನಳಿನಿ, ಮೋಹಿನಿ, ಗೀತಾ, ಕಳಿಯ ಗ್ರಾಮಕರಣಿಕ ರವಿ ವಿ.ಎಮ್. ಪಂ.ಕಾರ್ಯದರ್ಶಿ ಕುಂಞ ಹಾಗೂ ಸಿಬ್ಬಂದಿವರ್ಗ, ವಿಜಯ ಕುಮಾರ್ ಕಲಾಯಿತೊಟ್ಟು, ರಮೇಶ್ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.
ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ.ಸ್ವಾಗತಿಸಿ, ಧನ್ಯವಾದವಿತ್ತರು.

ಕಳೆದ ಸುಮಾರು ವರ್ಷಗಳಿಂದ ಕಳಿಯ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ರಹಿತ ಕುಟುಂಬಗಳಿದ್ದು, ನಿವೇಶನ ಹಂಚಿಕೆಯಾಗದೇ ಇದ್ದುದರಿಂದ ಮಾವಿನಕಟ್ಟೆ ಮತ್ತು ಪದಗೊಳಿಯಲ್ಲಿ ನಿವೇಶನಕ್ಕೆ ಜಮೀನು ಗುರುತಿಸಲಾಗಿದೆ. ಪಂಚಾಯತನಲ್ಲಿ ಸಭೆ ನಡೆಸಿ ಕಡುಬಡವ, ನಿರ್ಗತಿಕ ಕುಟುಂಬಗಳನ್ನು ಆಯ್ಕೆ ಮಾಡಲಾಗುತ್ತದೆ
ಶರತ್ ಕುಮಾರ್, ಕಳಿಯ ಗ್ರಾ.ಪಂ. ಅಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.