ತಾಲೂಕಿನಲ್ಲಿ ನೆರೆಯಿಂದ ಜನತೆಗೆ ಸಂಕಷ್ಟ: ಬೆಳ್ತಂಗಡಿ ಶ್ರೀ ಕೃಷ್ಣೋತ್ಸವ ರದ್ದು

ಬೆಳ್ತಂಗಡಿ: ತಾಲೂಕಿನ ‘ನಮ್ಮೂರ  ಹಬ್ಬ’ ಎಂದೇ ಖ್ಯಾತಿ ಪಡೆದ ಶ್ರೀ ಕೃಷ್ಣೋತ್ಸವವನ್ನು ತಾಲೂಕಿನಲ್ಲಿ ನೆರೆಯಿಂದ ಜನತೆ ಸಂಕಷ್ಟದಲ್ಲಿರುವುದರಿಂದ ಈ ವರ್ಷ ರದ್ದುಪಡಿಸಲಾಗಿದೆ ಎಂದು ಶ್ರೀ ಕೃಷ್ಣೋತ್ಸವ ಸಮಿತಿಯ ಸಂಘಟಕರು ಸೆ.11 ರಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನಲ್ಲಿ ಇತ್ತೀಚಿಗಿನ ಅವ್ಯಾಹಿತ ಮಳೆಯಿಂದ ಈ ಹಿಂದೆ ಕಂಡು ಕೇಳರಿಯದಂತಹ ಆಸ್ತಿ-ಪಾಸ್ತಿ ಹಾನಿಗೊಳಗಾಗಿ ನೆರೆಪೀಡಿತ ಪ್ರದೇಶಗಳ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶ್ರೀಕೃಷ್ಣ ಅಷ್ಟಮಿಯನ್ನು ಸರಳವಾಗಿ ಆಚರಿಸಲಾಗಿದ್ದು, ನಮ್ಮ ಸಂತೃಪ್ತ ಬಂಧುಗಳು ಸಂಕಷ್ಟದ ಭಾವನೆಯಲ್ಲಿ ಸಿಲುಕಿರುವಾಗ ನಾವು ಸಂತೋಷಪಡುತ್ತಿರುವುದು ತರವಲ್ಲ ಎಂಬ ಮನೋಭಾವನೆಯಿಂದ ಬೆಳ್ತಂಗಡಿ ಶ್ರೀ ಕೃಷ್ಣೋತ್ಸವ ಸಮಿತಿಯ ಎಲ್ಲಾ ಸದಸ್ಯರು ಒಮ್ಮತದಿಂದ ಪ್ರವಾಹ ಸಂತ್ರಸ್ತರ ದುಃಖ- ದುಮ್ಮಾನಗಳಲ್ಲಿ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸುವುದರೊಂದಿಗೆ ಅವರಿಗೆ ನೆರವಾಗುವ ಆಶಯದೊಂದಿಗೆ ರದ್ದುಗೊಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕೃಷ್ಣೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಸಂತೋಷ್ ಜೈನ್, ಪ್ರಕಾಶ್ ಆಚಾರ್ಯ, ಅಧ್ಯಕ್ಷ ಶರತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಲಾಲ, ಉಪಾಧ್ಯಕ್ಷ ಪ್ರಸಾದ್ ಸುಧೆಮುಗೇರು, ಜೊತೆ ಕಾರ್ಯದರ್ಶಿ ಜಗದೀಶ್ ಕನ್ನಾಜೆ, ಕರುಣಾಕರ ಕೆರಳಕೋಡಿ, ಸದಸ್ಯರಾದ ಸಾತ್ವಿಕ್, ಯತೀಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.