ಪೊಲೀಸರಿಗೆ ನಿಸರ್ಗ ವಿಕೋಪದ ಕಾರ್ಯಾಚರಣೆ ಭಿನ್ನವಾದ ಸವಾಲು: ಐಜಿಪಿ ಅರುಣ್ ಚಕ್ರವರ್ತಿ ಐಪಿಎಸ್

ನೆರೆ ರಕ್ಷಣೆ ಕೈಗೊಂಡ ಪೊಲೀಸ್, ಅಗ್ನಿಶಾಮಕ, ಎ.ಎನ್‌.ಎಫ್ ಸಿಬ್ಬಂದಿಗೆ ಸನ್ಮಾನ

ಬೆಳ್ತಂಗಡಿ: ಪೊಲೀಸ್ ಇಲಾಖೆಯ ಜವಾಬ್ಧಾರಿಗಳಲ್ಲಿ ಅನೇಕ ಸವಾಲುಗಳು ಇವೆ. ಕಾನೂನಿನ ರಕ್ಷಣೆ, ಅಪರಾಧ ತಡೆಯುವುದು, ಮತೀಯ ಗಲಬೆಗಳನ್ನು ಹತ್ತಿಕ್ಕುವುದು, ನಕ್ಸಲ್ ಚಟುವಟಿಕೆ ದಮನ, ಇವುಗಳ ಜೊತೆಗೆ ನಿಸರ್ಗದ ವಿಕೋಪದ ಸಂದರ್ಭ ಕೈಗೊಳ್ಳುವ ಕರ್ತವ್ಯ ಭಿನ್ನವಾದ ಸವಾಲು, ಅದನ್ನು ನನ್ನ ಪಶ್ಚಿಮ ವಲಯದ 4 ಜಿಲ್ಲೆಗಳ ನಮ್ಮ ಸಿಬ್ಬಂದಿಗಳು ಅತ್ಯಂತ ಜವಾಬ್ಧಾರಿಯುವತಾಗಿ ಕೈಗೊಂಡಿದ್ದಾರೆ ಎಂದು ಪಶ್ಚಿಮವಲಯ ಐಜಿಪಿ ಅರುಣ್ ಚಕ್ರವರ್ತಿ ಹೇಳಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ  ನಡೆದ ಕಾರ್ಯಕ್ರಮವೊಂದರಲ್ಲಿ ತಾಲೂಕಿನಲ್ಲಿ ನೆರೆಪೇಡಿತ ಪ್ರದೇಶಗಳ ನಾಗರಿಕರ ಪ್ರಾಣರಕ್ಷಣೆಗಾಗಿ ನೆರವಾದ ತಾ| ಪೊಲೀಸ್ ಇಲಾಖೆ, ಅಗ್ನಿಶಾಮಕ, ಎನ್‌ಎಫ್ ಸಿಬ್ಬಂದಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಧರ್ಮಸ್ಥಳ, ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಸನ್ಮಾನ:
ಸನ್ಮಾನದ ಸಾಲಿನಲ್ಲಿ ಮೊದಲಿಗೆ ಬೆಳ್ತಂಗಡಿ ಎಸ್.ಐ ರವಿ ಬಿಎಸ್, ಧರ್ಮಸ್ಥಳ ಠಾಣೆಯ ಅವಿನಾಶ್ ಗೌಡ ಅವರನ್ನು ಐಜಿಪಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿದರು.
ರವಿ ಬಿಎಸ್ ತಂಡದವರು ನಾಗರಿಕರ ಸಹಾಯದೊಂದಿಗೆ ದಿಡುಪೆ ಪ್ರದೇಶದ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ವಿಚಾರವನ್ನು ತಮ್ಮ ಭಾಷಣದಲ್ಲಿ ಐಜಿಪಿ ಸ್ಮರಿಸಿಕೊಂಡರು.
ಸನ್ಮಾನ ಪಡೆದ ಇತರರು:
ದುರ್ಗಾದಾಸ್, ಹರೀಶ್ ನಾಯ್ಕ, ಸವಿತಾ, ಅಶೋಕ, ವೆಂಕಟೇಶ್, ಮುತ್ಯಪ್ಪ, ರವೀಂದ್ರ ನಾಯ್ಕ, ರಾಜೇಶ್, ದೇವಿಪ್ರಸಾದ್, ರಾಹುಲ್ ರಾವ್, ಚೌಡಪ್ಪ, ಕೃಷ್ಣಪ್ಪ, ಹರೀಶ್ ಕುಮಾರ್,ಎಎನ್‌ಎಫ್‌ನ ರಾಜೇಶ್, ರಾಮಣ್ಣ ಗೌಡ, ಯತೀಂದ್ರ ಮತ್ತು ರಘು, ಅಗ್ನಿಶಾಮಕ ಇಲಾಖೆಯ ಮುಖ್ಯಫೈರ್‌ಮೇನ್ ಕೃಷ್ಣ ನಾಯಕ್, ಚಾಲಕ ಶಂಕರ, ಫೈರ್‌ಮೇನ್ ಉಸ್ಮಾನ್ ಗರ್ಡಾಡಿ ಇವರನ್ನು ಐಜಿಪಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮ್ಟೆ, ಬಂಟ್ವಾಳ ಎಎಸ್‌ಪಿ ಡಾ. ಸೈಡುಲ್ಲಾ ಅಡಾವತ್, ಡಿವೈಎಸ್‌ಪಿ ನಟರಾಜ್ ಉಪಸ್ಥಿತರಿದ್ದರು.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಸ್ವಾಗತಿಸಿ ಧನ್ಯವಾದವಿತ್ತರು. ಠಾಣಾ ಬರಹಗಾರ ವೆಂಕಪ್ಪ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.