ಹುಣ್ಸೆಕಟ್ಟೆ : 19 ನೇ ವರ್ಷದ ಗಣೇಶೋತ್ಸವ

ಬೆಳ್ತಂಗಡಿ : ಇಲ್ಲಿಯ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯ 19 ನೇ ವರ್ಷದ ಗಣೇಶೋತ್ಸವ  ಧಾರ್ಮಿಕ ಸಭೆಯು ಇತ್ತೀಚೆಗೆ ಹುಣ್ಸೆಕಟ್ಟೆಯ ಸಮುದಾಯ ಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಸಚಿನ್ ಸಾಲಿಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಪ.ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ್ ರಾವ್, ಯುವ ಉದ್ಯಮಿ ಅಶ್ವಥ್ ಹೆಗ್ಡೆ, ಪ.ಪಂಚಾಯತ್ ಸದಸ್ಯೆ ತುಳಸಿ ಕರುಣಾಕರ್,ಪತ್ರಕರ್ತ ಮನೋಹರ್ ಬಳಂಜ, ಭಜನಾ ಮಂಡಳಿಯ ಮಹಿಳಾ ಸಮಿತಿಯ ಅಧ್ಯಕ್ಷೆ ಉಮಾವತಿ,ಬೆಳ್ತಂಗಡಿ ಪ್ರ.ಬಂ. ಸ್ವ ಸಹಾಯ ಸಂಘದ ಅಧ್ಯಕ್ಷ ದಯಾನಂದ್ ಕೋಟ್ಯಾನ್, ಆರ್.ಎಫ್.ಸಿ ಗೈಯ್ಸ್‌ನ ಅಧ್ಯಕ್ಷ ಕಿರಣ್, ಕೆಂಬರ್ಜೆ ಫ್ರೆಂಡ್ಸ್‌ನ ಅಧ್ಯಕ್ಷ ಪ್ರಜ್ವಲ್, ಕೃಷಿಕ ಸತೀಶ್ ದೊಡ್ಡಮನೆ, ಮ.ಹಾ.ಉ.ಸ.ಸಂಘದ ಅಧ್ಯಕ್ಷೆ ರಮಾದೇವಿ, ಯುವ ಉದ್ಯಮಿ ಜಯರಾಜ್, ಕೆಲ್ಲಗುತ್ತು ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ಅಧ್ಯಕ್ಷ ಬಾಬು.ಪಿ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಯಂಕಾಲ ನಡೆದ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೂನಿಯರ್ ಸಲ್ಮಾನ್‌ಖಾನ್ ಹಾಗೂ ಜೂನಿಯರ್ ಶಾರುಖ್ ಖಾನ್ ವಿಶೇಷ ಆಕರ್ಷಣೆಯಾಗಿತ್ತು. ಡ್ರಾಮ ಜೂನಿಯರ್ ಸೀಸನ್-2 ವಿನ್ನರ್ ಜೂನಿಯರ್ ಲಕ್ಷ್ಮೀ ಖ್ಯಾತಿಯ ವಂಶಿಯವರಿಂದ ವೈವಿಧ್ಯಮಯ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಹಿತಶ್ರೀ ನಿರೂಪಿಸಿ ಗುಣಶ್ರೀ ಸ್ವಾಗತಿಸಿ ಸೀತಾರಾಮ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.