ಸೆ.14 : ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

ಬೆಳ್ತಂಗಡಿ: 2019-20ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಸೆ.14 ರಂದು ದಿ| ರತ್ನವರ್ಮ ಕ್ರೀಡಾಂಗಣ ಉಜಿರೆ ಇಲ್ಲಿ ನಡೆಯಲಿದೆ ಎಂದು ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಕಬ್ಬಡ್ಡಿ, ವಾಲಿಬಾಲ್, ಪುಟ್‌ಬಾಲ್, ಖೋ-ಖೋ ಮತ್ತು ಅಥ್ಲೆಟಿಕ್ಸ್ ಮಹಿಳಾ ವಿಭಾಗದಲ್ಲಿ ಕಬ್ಬಡ್ಡಿ, ವಾಲಿಬಾಲ್, ಖೋ-ಖೋ ಮತ್ತು ಅಥ್ಲೆಟಿಕ್ಸ್ ಪಂದ್ಯಾಟಗಳು ಜರುಗಲಿದೆ. ಗ್ರಾಮೀಣ ಪ್ರದೇಶದ ಕ್ರೀಡಾ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.