ಆಲಂದಡ್ಕದಲ್ಲಿ ಶ್ರೀ ಗಣೇಶೋತ್ಸವ

ಕಡಿರುದ್ಯಾವರ: ಇಲ್ಲಿಯ ಆಲಂದಡ್ಕ ಕೆ ರಾಮಕೃಷ್ಣ ಪ್ರಭು ಸ್ಮಾರಕ ಕಲಾ ವೇದಿಕೆ ವತಿಯಿಂದ ಇಂದಬೆಟ್ಟು ವೇ| ಅನಂತರಾಮ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಗಣೇಶೋತ್ಸವವು ಸೆ.2 ರಿಂದ 5 ರವರೆಗೆ ಕೆ. ವಿನಾಯಕ ಪ್ರಭು ರವರ ಆಲಂದಡ್ಕ ಮನೆಯಲ್ಲಿ ಜರುಗಿತು.
ಸೆ.2 ರಂದು ಬೆಳಿಗ್ಗೆ ಮೂರ್ತಿ ಪ್ರತಿಷ್ಠಾಪನೆ, ಗಣಹೋಮದೊಂದಿಗೆ ಮೊದಲ್ಗೊಂಡು ಮಧ್ಯಾಹ್ನ ಮಹಾಪೂಜೆ ನಡೆದು, ರಾತ್ರಿ ರಂಗಪೂಜೆ ಹಾಗೂ ಕಡಿರುದ್ಯಾವರ ಶ್ರೀ ಸರಸ್ವತಿ ಭಜನಾ ಸೇವಾ ಸಂಘದಿಂದ ಭಜನೆ ನಡೆಯಿತು. ಸೆ.3 ರಂದು ಊರವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದು, ಸೆ.4 ರಂದು ಬೆಳಿಗ್ಗೆ 12 ಕಾಯಿಗಳ ಗಣಹೋಮ, ರಂಗಪೂಜೆ ನಡೆಯಿತು.
ಸೆ.5 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ನಂತರ ಶ್ರೀ ಗಣೇಶ ಮೂರ್ತಿಯ ಜಲಸ್ಥಂಬನ ನೆರವೇರಿತು. ಕಾರ್ಯಕ್ರಮದಲ್ಲಿ ಕೆ. ವಿನಾಯಕ ಪ್ರಭು ಮತ್ತು ಕುಟುಂಬಸ್ಥರು, ಊರ- ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.