ಫೆ. 6-15: ಕಾಜೂರು ಉರೂಸ್‌ಗೆ ದಿನಾಂಕ ಪ್ರಕಟ

ಕಾಜೂರಿನಲ್ಲಿ ನಾರಿಯತ್ ಸ್ವಲಾತ್ ಧಾರ್ಮಿಕ ಕಾರ್ಯಕ್ರಮ

ಕುಂಬೋಳ್ ತಂಙಳ್‌ರನ್ನು ಕಾಜೂರು- ಕಿಲ್ಲೂರು ಸಮಿತಿಗಳ ಪರವಾಗಿ ಸನ್ಮಾನಿಸುತ್ತಿರುವುದು:

ಕಾಜೂರು: ಇಲ್ಲಿನ ದರ್ಗಾಶರೀಫ್ ಮತ್ತು ಜುಮ್ಮಾ ಮಸ್ಜಿದ್ ಇಲ್ಲಿನ ಮುಂದಿನ ವರ್ಷದ ಉರೂಸ್ ಪ್ರಕ್ರೀಯೆ ಫೆ. 6 ರಿಂದ ಆರಂಭಗೊಂಡು 15 ರ ವರೆಗೆ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷರೂ ಆಗಿರುವ ಪ್ರಖ್ಯಾತ ಧಾರ್ಮಿಕ ವಿದ್ವಾಂಸ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ದಿನಾಂಕ ಪ್ರಕಟಿಸಿದರು.
ಕಾಜೂರು ದರ್ಗಾಶರೀಫ್ ಆಡಳಿತ ಮಂಡಳಿ, ಮತ್ತು ಕಿಲ್ಲೂರು ಜಮಾಅತ್ ಆಡಳಿತ ಮಂಡಳಿ ವತಿಯಿಂದ ಸೆ. 1 ರಂದು ನಡೆದ ನಾರಿಯತ್ ಸ್ವಲಾತ್ ಮಜ್ಲಿಸ್ ವಿಶೇಷ ಧಾರ್ಮಿಕ ಅನುಭೂತಿಯ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಸಯ್ಯಿದ್ ಕಾಜೂರು ತಂಙಳ್, ಕುಂಬೋಳ್ ಕುಂಞಿಕೋಯ ತಂಙಳ್, ಸಯ್ಯಿದ್ ಕಿಲ್ಲೂರು ತಂಙಳ್, ಸಯ್ಯಿದ್ ಸಾದಾತ್ ತಂಙಳ್ ಧಾರ್ಮಿಕ  ನಾಯಕತ್ವ ನೀಡಿದರು.


ಕಾಜೂರು ಆಡಳಿತ ಮಂಡಳಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರ. ಕಾರ್ಯದರ್ಶಿ ಜೆ.ಎಚ್ ಸಿದ್ದೀಕ್, ಕೋಶಾಧಿಕಾರಿ ಕಮಾಲ್ ಕಾಜೂರು, ಕಿಲ್ಲೂರು ಸಮಿತಿ ಅಧ್ಯಕ್ಷ ಮುಹಮ್ಮದ್, ಬಿ.ಎಮ್ ಹಮೀದ ಹಾಜಿ ಉಜಿರೆ, ಗುತ್ತಿಗೆದಾರ ಯಾಕೂಬ್ ಅಜಿಕುರಿ, ಬಿ.ಎಚ್ ಹಮೀದ್, ಅಬೂಬಕ್ಕರ್ ಮಲ್ಲಿಗೆಮನೆ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಬದ್ರುದ್ದೀನ್ ಕಾಜೂರು, ಕಾಜೂರು ಹಾಗೂ ಕಿಲ್ಲೂರು ಜಂಟಿ ಜಮಾಅತ್‌ಗಳ ಸದಸ್ಯರುಗಳು ಉಪಸ್ಥಿತರಿದ್ದರು. ರಿಫಾಯಿ ಆರ್‌ಡಿಸಿ, ಕಿಲ್ಲೂರು ಯಂಗ್‌ಮೆನ್ಸ್ ಸಮಿತಿ ಕಾರ್ಯಕ್ರಮ ಸಂಯೋಜಿಸಿದ್ದರು.
ಮಾಜಿ ಅಡಳಿತಾಧಿಕಾರಿ ಮುಹಮ್ಮದ್ ರಫಿ ಅವರನ್ನು ಜಂಟಿ ಸಮಿತಿಗಳ ಪರವಾಸಿ ಸನ್ಮಾನಿಸಲಾಯಿತು. ಕುಂಬೋಳ್ ತಂಙಳ್‌ರನ್ನು ಗೌರವಾಧ್ಯಕ್ಷರಾಗಿಮುಂದುವರಿಸಿ ಅವರಿಗೂ ಸನ್ಮಾನ ನಡೆಯಿತು.
ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು. ಎಂ.ಎ ಕಾಸಿಂ ಮಲ್ಲಿಗೆಮನೆ ಪ್ರಾಸ್ತಾವಿಕ ಭಾಷಣ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.