HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಸ್ಕೃತೋತ್ಸವ


ಉಜಿರೆ: ದಿನನಿತ್ಯದ ಬಳಕೆಯಲ್ಲಿ ಸಂಸ್ಕೃತಭಾಷೆಯು ಅಪಾರವಾಗಿದೆ. ನಮ್ಮ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ ಮತ್ತು ಸಾಹಿತ್ಯದಲ್ಲಿ ಸಂಸ್ಕೃತ ಭಾಷೆಯು ಸೇರಿದ್ದು, ಇಂದಿನ ಆಧುನಿಕ ಜಗತ್ತಿನ ಪ್ರತಿ ವಸ್ತುವಿನಲ್ಲೂ ಕೂಡ ಸಂಸ್ಕೃತಪದಗಳಿವೆ ಎಂದು ಸಂಸ್ಕೃತ ಭಾರತಿಯ ಸದಸ್ಯೆ ಅಭಿಜ್ಞಾ ಉಪಧ್ಯಾಯ ಹೇಳಿದರು.
ಅವರು ಉಜಿರೆಯ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲ್ಪಟ್ಟ ಸಂಸ್ಕೃತೋತ್ಸವದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.


ವೇದಿಕೆಯಲ್ಲಿ ಶಾಲಾ ಕನ್ನಡ ಶಿಕ್ಷಕಿ ರೇಷ್ಮಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ಯಾರ್ಥಿ ಕಾರ್ತಿಕ್ ಹಿಂದೂ ಪಂಚಾಗ ಮತ್ತು ಸಂಸ್ಕೃತದಲ್ಲಿ ವಿಜ್ಞಾನ ಎಂಬುದರ ಕುರಿತು ಮಾತನಾಡಿದರು. ಸಂಸ್ಕೃತ ವಿದ್ಯಾರ್ಥಿ ಭಾರವೀ ಧಾರ್ಮಿಕ ಪಠಣ ವಾಚಿಸಿದರು. ವಿದ್ಯಾರ್ಥಿನಿ ಅಹಲ್ಯಾ ಸ್ವಾಗತಿಸಿ, ಮನಸ್ವಿನಿ ವಂದಿಸಿದರು. ವಿದ್ಯಾರ್ಥಿನಿ ಪೂಜಾ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತೋತ್ಸವದಲ್ಲಿ ವಸ್ತುಪ್ರದರ್ಶನ ಏರ್ಪಡಿಲಾಗಿತ್ತು. ಕಾರ್ಯಕ್ರಮವನ್ನು ಸಂಸ್ಕೃತ ಭಾಷಾ ಶಿಕ್ಷಕಿ ಸುಧಾಶ್ರೀ, ಕನ್ನಡ ಭಾಷಾ ಶಿಕ್ಷಕಿ ಗೀತಾ ಮತ್ತು ಆಂಗ್ಲ ಭಾಷಾ ಶಿಕ್ಷಕ ಅನಿಲ್ ಪಿರೇರ ನಿರ್ವಹಿಸಿದರು.
ವರದಿ: ಸುಧಾಶ್ರೀ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.