“ಉತ್ತಮ ಶಾಲಾ ಪ್ರಶಸ್ತಿ” .ಶಾಲಾ ಅಭಿವೃದ್ದಿ ಮತ್ತು ಪೋಷಕರಿಂದ ಶಿಕ್ಷಕರಿಗೆ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರಕ್ತೇಶ್ವರಿ ಪದವು : ಇಲ್ಲಿಯ ಸರಕಾರಿ ಕಿರಿಯ ಪ್ರಾಥಮಿಕ ವಿಭಾಗದ 2018-19 ನೇ ಸಾಲಿನ ಬೆಳ್ತಂಗಡಿ ತಾಲೂಕು “ಉತ್ತಮ ಶಾಲಾ ಪ್ರಶಸ್ತಿ” ಯನ್ನು ಪಡೆದ  ಶಾಲಾ   ಶಿಕ್ಷಕಿಯರಿಗೆ   ಅಭಿನಂದನಾ ಕಾರ್ಯಕ್ರಮವು  ಇತ್ತೀಚೆಗೆ   ಶಾಲಾ ಸಭಾಂಗಣದಲ್ಲಿ ನಡೆಯಿತು .
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಗೌಡ ಕಲಾಯಿತೋಟ್ಟು ಇವರು    ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಶ್ರೀ ಶ್ಯಾಮ್, ಸಹ ಶಿಕ್ಷಕಿ ಲಾವಣ್ಯ ಗೌರವ ಶಿಕ್ಷಕಿ ವಿದ್ಯಾ ಶ್ರೀ, ಇವರಿಗೆ  ಅಭಿನಂದನೆ ಸಲ್ಲಿಸಿದರು.

ಈ  ಶಾಲೆಯನ್ನು ರೈಲು ಮಾದರಿಯಲ್ಲಿ ವಿನೂತನವಾಗಿ ಪೈಂಟ್ ಮಾಡಲಾಗಿದ್ದು ,ಪ್ರಿಂಟರ್ , ಇನ್ವರ್ಟರ್ ,ಸ್ಪೀಕರ್ , ಪ್ರತಿಭಾ ಪ್ರದರ್ಶನಕ್ಕೆ ನೇತಾಜಿ ರಂಗ ಮಂಟಪ, ಸುಸಜ್ಜಿತ  ನಲಿ – ಕಲಿ  ಕೊಠಡಿ ಮತ್ತು ಆಸನ ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ (ಅಕ್ವಗಾರ್ಡ್ ), ಆಕರ್ಶಣೀಯ ಶಾಲಾ ಉದ್ಯಾನವನ, ತೆಂಗು. ತರಕಾರಿ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ , ಸ್ಮಾರ್ಟ್ ಕ್ಲಾಸ್ ಮೂಲಕ ಬೋಧನೆ, ಕಂಪ್ಯೂಟರ್ ಶಿಕ್ಷಣಕ್ಕೆ ಗೌರವ ಶಿಕ್ಷಕಿ ನೇಮಕ, ಗ್ರಂಥಾಲಯ ಮತ್ತು ಪ್ರಯೋಗಾಲಯ ಸೌಲಭ್ಯ ಸ್ಮರ್ಧಾತ್ಮಕ ಪರೀಕ್ಷೆಗೆ  (ನವೋದಯ.ಮೊರಾರ್ಜಿ ದೇಸಾಯಿ) ಮಾರ್ಗದರ್ಶನ, ವಲಯ ಮತ್ತು ತಾಲೂಕು ,ಮಟ್ಟದ ಪ್ರತಿಭಾ ಕಾರಂಜಿಯಲ್ಲಿ , ವಿದ್ಯಾರ್ಥಿಗಳ ಉತ್ತಮ ಸಾಧನೆ, ಕ್ರೀಡೆ, ಕಾರ್ಯಾನುಭವ, ಕೃಷಿ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಆಟದ ಮೈದಾನ , ಅಕ್ಷರ ದಾಸೋಹ ಕೊಠಡಿ, ಕೊಳವೆ ಬಾವಿ , ಶೌಚಾಲಯ ಮೊದಲಾದ ಉತ್ತಮ ಸೌಲಭ್ಯಗಳನ್ನು  ಶಾಲೆಯು ಹೊಂದಿದೆ .    ಈ ಸಂದರ್ಭದಲ್ಲಿ  ಉಪಾಧ್ಯಕ್ಷೆ ಲಲಿತ ರಕ್ತೇಶ್ವರಿ ಪದವು, ಕಳಿಯ ಪಂಚಾಯತ ಸದಸ್ಯೆ ಮೋಹಿನಿ ಹಾಕೋಟೆ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ  ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು,ವಿಧ್ಯಾಭಿಮಾನಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು. ಹಾಗೂ ಸಿಹಿ ತಿಂಡಿ ವಿತರಣೆ ಮಾಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.