ಮೇಲಂತಬೆಟ್ಟುವಿನಲ್ಲಿ ರೋಮಾಂಚನಕಾರಿ ಬೈಕ್ ರೇಸ್

ಮೇಲಂತಬೆಟ್ಟು : ಮೇಲಂತಬೆಟ್ಟು ಪಕ್ಕಿದಕಲ ನವೋದಯ ಯುವಕ ಮಂಡಲ ಹಾಗೂ ಯುವತಿ ಮಂಡಲದ ವತಿಯಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 23ನೇ ವರ್ಷದ ಆಟೋಟ ಸ್ಪರ್ಧೆ ಮತ್ತು ಮೋಟೋಕ್ರಾಸ್ ಸ್ಪರ್ಧೆಯು ಸೆ.8 ರಂದು ಜರುಗಿತು.
ಇಲ್ಲಿನ ಗುಡ್ಡ ಪ್ರದೇಶದಲ್ಲಿ ಸುಮಾರು ಗುಡ್ಡ ಪ್ರದೇಶದಲ್ಲಿ ಸುಮಾರು 2 ಕಿ.ಮೀವರೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿ ಬೈಕ್ ಸವಾರರ ಸಾಹಸಮಯ ಪ್ರದರ್ಶನಗಳ ಮೂಲಕ 4 ಸ್ಟ್ರೋಕ್, 2 ಸ್ಟ್ರೋಕ್, ಸ್ಥಳೀಯ  ಹೀಗೆ  3 ವಿಧದಲ್ಲಿ ಬೈಕ್ ರೇಸ್ ನಡೆಯಿತು.  ಈ  ಸ್ಪರ್ಧೆಯಲ್ಲಿ 4  ಸ್ಟ್ರೋಕ್ ನಲ್ಲಿ ಪ್ರಥಮ ಇಮ್ರಾನ್ ಪಾಷಾ, ದ್ವಿತೀಯ  ಸಯ್ಯದ್ ಅಕೀಬ್, ತೃತೀಯ ಸ್ಥಾನವನ್ನು  ಸಂದೀಪ್ ಕೊಟ್ಟಾರಿ  ಪಡೆದುಕೊಂಡಿದ್ದಾರೆ. 2 ಸ್ಟ್ರೋಕ್ ನಲ್ಲಿ  ಪ್ರಥಮ ಅರುಣ್.ಟಿ, ದ್ವಿತೀಯ  ಸಂದೀಪ್ ಕೊಟ್ಟಾರಿ, ತೃತೀಯ  ಇಮ್ರಾನ್ ಪಾಷಾ  ಪಡೆದಿದ್ದಾರೆ. ಹಾಗೆಯೇ  ಸ್ಥಳೀಯ  ವಿಭಾಗದಲ್ಲಿ ಪ್ರಥಮ  ಸುಪಾರ್ಶ, ದ್ವಿತೀಯ ಸಂತೋಷ್, ತೃತೀಯ  ರೇಸ್‌ನ ರಸ್ತೆ ಬದಿಯಲ್ಲಿ ರಿಬ್ಬನ್ ಕಟ್ಟುವ ಮೂಲಕ ಜನರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.