ಮೇಲಂತಬೆಟ್ಟು : ಮೇಲಂತಬೆಟ್ಟು ಪಕ್ಕಿದಕಲ ನವೋದಯ ಯುವಕ ಮಂಡಲ ಹಾಗೂ ಯುವತಿ ಮಂಡಲದ ವತಿಯಿಂದ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 23ನೇ ವರ್ಷದ ಆಟೋಟ ಸ್ಪರ್ಧೆ ಮತ್ತು ಮೋಟೋಕ್ರಾಸ್ ಸ್ಪರ್ಧೆಯು ಸೆ.8 ರಂದು ಜರುಗಿತು.
ಇಲ್ಲಿನ ಗುಡ್ಡ ಪ್ರದೇಶದಲ್ಲಿ ಸುಮಾರು ಗುಡ್ಡ ಪ್ರದೇಶದಲ್ಲಿ ಸುಮಾರು 2 ಕಿ.ಮೀವರೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿ ಬೈಕ್ ಸವಾರರ ಸಾಹಸಮಯ ಪ್ರದರ್ಶನಗಳ ಮೂಲಕ 4 ಸ್ಟ್ರೋಕ್, 2 ಸ್ಟ್ರೋಕ್, ಸ್ಥಳೀಯ ಹೀಗೆ 3 ವಿಧದಲ್ಲಿ ಬೈಕ್ ರೇಸ್ ನಡೆಯಿತು. ಈ ಸ್ಪರ್ಧೆಯಲ್ಲಿ 4 ಸ್ಟ್ರೋಕ್ ನಲ್ಲಿ ಪ್ರಥಮ ಇಮ್ರಾನ್ ಪಾಷಾ, ದ್ವಿತೀಯ ಸಯ್ಯದ್ ಅಕೀಬ್, ತೃತೀಯ ಸ್ಥಾನವನ್ನು ಸಂದೀಪ್ ಕೊಟ್ಟಾರಿ ಪಡೆದುಕೊಂಡಿದ್ದಾರೆ. 2 ಸ್ಟ್ರೋಕ್ ನಲ್ಲಿ ಪ್ರಥಮ ಅರುಣ್.ಟಿ, ದ್ವಿತೀಯ ಸಂದೀಪ್ ಕೊಟ್ಟಾರಿ, ತೃತೀಯ ಇಮ್ರಾನ್ ಪಾಷಾ ಪಡೆದಿದ್ದಾರೆ. ಹಾಗೆಯೇ ಸ್ಥಳೀಯ ವಿಭಾಗದಲ್ಲಿ ಪ್ರಥಮ ಸುಪಾರ್ಶ, ದ್ವಿತೀಯ ಸಂತೋಷ್, ತೃತೀಯ ರೇಸ್ನ ರಸ್ತೆ ಬದಿಯಲ್ಲಿ ರಿಬ್ಬನ್ ಕಟ್ಟುವ ಮೂಲಕ ಜನರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.