ಬೆಳ್ತಂಗಡಿ ನೆರೆ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗದ ಭರವಸೆ : ದೇವಿಪ್ರಸಾದ್ ಬೊಳ್ಮ

ಬೆಳ್ತಂಗಡಿ : ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಅಶ್ವಿನ್ ಪ್ರೀಸಿಷನ್ ಪ್ರೊಡಕ್ಟ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ (ಆರ್ ಡಿ ಪಿ ಆರ್) ರಾಜ್ಯ ಸಮಿತಿ ಸಹಯೋಗದೊಂದಿಗೆ  ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ದಿಡುಪೆ, ಮಿತ್ತಬಾಗಿಲು, ಮಲವಂತಿಗೆ, ಕುಕಾವು, ಕಿಲ್ಲೂರು, ಚಾರ್ಮಾಡಿ, ಕೊಳಂಬೆ, ಕಡಿರುದ್ಯಾವರ, ಇಂದಬೆಟ್ಟು ,ಕಲ್ಮಂಜ , ಪುದುವೆಟ್ಟು, ಲಾಯಿಲ ,ಪ್ರದೇಶಗಳಲ್ಲಿ ಮನೆಗಳಿಗೆ ತೊಂದರೆ ಆಗಿರುವ 300 ಕುಟುಂಬಗಳಿಗೆ ಅಡುಗೆ ಪಾತ್ರೆಗಳು ಹಾಗೂ ಎರಡು ಟನ್ ಅಕ್ಕಿ, ಏಳುವರೆ ಕ್ವಿಂಟಾಲ್ ತೊಗರಿಬೇಳೆ, ಏಳುವರೆ ಕ್ವಿಂಟಾಲ್ ಅಲಸಂಡೆ ಬೀಜ ಎರಡೂವರೆ ಕ್ವಿಂಟಾಲ್ ಉಪ್ಪನ್ನು ಪ್ರವಾಹಪೀಡಿತ ಪ್ರದೇಶಗಳಿಗೆ ಹಾಗೂ ಮನೆಗಳಿಗೆ ತೆರಳಿ ವಿತರಿಸಲಾಯಿತು.

ಶ್ರೇಯೋಭಿವೃಧ್ಧಿ ಸಂಘದ ದೇವಿ ಪ್ರಸಾದ ಬೊಳ್ಮರವರ ಬೇಡಿಕೆಯಂತೆ ಬೆಳ್ತಂಗಡಿ ತಾಲೂಕು ಪ್ರವಾಹ ಪೀಡಿತ ಪ್ರದೇಶಗಳ ಯುವಕ ಯುವತಿಯರಿಗೆ ಅಶ್ವಿನ್ ಪ್ರೀಸಿಷನ್ ಪ್ರೊಡಕ್ಟ್ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಇವರಿಂದ ಉದ್ಯೋಗ ನೀಡುವುದಾಗಿ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಶ್ವಿನ್ ಪ್ರೇಸಿಷನ್ ಪ್ರೊಡಕ್ಟ್ ಪ್ರೈವೆಟ್ ಲಿಮಿಟೆಡ್‌ನ ಅಧಿಕಾರಿಗಳಾದ ಚಂದ್ರಶೇಖರ್, ಶಿವಕುಮಾರ್,ಪ್ರಕಾಶ್ ಕುಮಾರ್,ಆದರ್ಶ,ಮಹ್ಮದ್ ಅಲಿ, ನಾಗರಾಜ್ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ (ಆರ್ ಡಿ ಪಿ ಆರ್)ನ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ಧರ್ಮಸ್ಥಳ, ರಾಕೇಶ್ ಕಲ್ಮಂಜ, ರಮೇಶ್, ಸುಲೇಮಾನ್ , ಡಿಎಸ್ ಬಾಬು, ಪ್ರದೀಪ್ ಗೌಡ, ರಾಜೇಂದ್ರ ಗೌಡ, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.