HomePage_Banner_
HomePage_Banner_
HomePage_Banner_

ಕಾಮಿಡಿ ಕಿಲಾಡಿ ಸೀಸನ್ 3 ಗೆ ವೇಣೂರಿನ ಪ್ರವೀಣ್ ಜೈನ್, ಕು| ದಿವ್ಯಾ ಅಂಚನ್ ಆಯ್ಕೆ

ವೇಣೂರು: ಝೀ ಕನ್ನಡದ ಕಾಮಿಡಿ ಕಿಲಾಡಿ ಸೀಸನ್ 3 ರಿಯಾಲಿಟಿ ಶೋಗೆ ಬೆಳ್ತಂಗಡಿ ತಾಲೂಕಿನ ವೇಣೂರು ಪಡ್ಡಂದಡ್ಕದ ಪ್ರವೀಣ್ ಜೈನ್ ಹಾಗೂ ಗುಂಡೂರಿ ಗ್ರಾಮದ ಕು| ದಿವ್ಯಾ ಅಂಚನ್ ಆಯ್ಕೆಯಾಗಿದ್ದಾರೆ.
ಅತ್ಯಂತ ಗ್ರಾಮೀಣ ಭಾಗದ ತೀರಾ ಬಡತನದಲ್ಲಿರುವ ಕುಟುಂಬ ಇವರದ್ದಾಗಿದ್ದು, ವೇಣೂರು ಕಲಾಕಾರ್ ತಂಡದಲ್ಲಿ ಕಲಾಭ್ಯಾಸ ಮಾಡಿದ್ದಾರೆ. ಈ ಹಿಂದೆ ಕಾಮಿಡಿ ಕಿಲಾಡಿಯಲ್ಲಿ ಭಾಗವಹಿಸಿ ರಾಜ್ಯದ ಕಲಾಸಕ್ತರ ಮನಗೆದ್ದಿರುವ ಅನೀಶ್ ಅಮೀನ್ ವೇಣೂರು ಹಾಗೂ ಹಿತೇಶ್ ಕಾಪಿನಡ್ಕ ಅವರು ಇವರಿಗೆ ತರಬೇತಿ ನೀಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಆಡಿಷನ್‌ಗೆ ತೆರಳಿದ್ದ ವೇಳೆ ದಿವ್ಯಾರ ತಾಯಿ ನಿಧನರಾಗಿದ್ದು, ಅಲ್ಲಿಂದ ವಾಪಸಾಗಿದ್ದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ತಾಯಿಯನ್ನು ಕಳೆದುಕೊಂಡ ನೋವಿನ ಮಧ್ಯೆಯೂ ಮತ್ತೆ ಆಡಿಷನ್‌ಗೆ ತೆರಳಿ ಆಯ್ಕೆಯಾಗಿದ್ದರು. ಪ್ರತೀ ಶನಿವಾರ ಹಾಗೂ ರವಿವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರಗೊಳ್ಳುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.