ವಕೀಲರ ಸಂಘದ ಮನವಿಗೆ ಸ್ಪಂದಿಸಿದ ತಹಶೀಲ್ದಾರ್

ಸಬ್ ರಿಜಿಸ್ಟ್ರಾರ್ ಕಚೇರಿ ಮಿನಿ ವಿಧಾನ ಸೌಧದ ನೆಲ ಮಹಡಿಗೆ ಸ್ಥಳಾಂತರಿಸಲು ಸೂಚನೆ

ಬೆಳ್ತಂಗಡಿ: ಉಪನೊಂದಾಣಾಧಿಕಾರಿಗಳ ಕಚೇರಿಯನ್ನು ಮಿನಿ ವಿಧಾನ ಸೌಧದ ಮೂರನೇ ಮಹಡಿಗೆ ಸ್ಥಳಾಂತರಿಸುವಂತೆ ನೀಡಿದ ಸೂಚನೆಯನ್ನು ಮರು ಪರಿಶೀಲಿಸುವಂತೆ ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು ಮಾಡಿಕೊಂಡ ಮನವಿಗೆ ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರು ಉಪನೊಂದಾಣಾಧಿಕಾರಿ ನಾಗರಾಜ್‌ರವರನ್ನು ಕರೆಸಿಯಿಸಿ ನೆಲ ಮಹಡಿಯಲ್ಲಿ 2 ಕೊಠಡಿಗಳನ್ನು ತೋರಿಸಿ ಕಚೇರಿಯನ್ನು ಸದ್ರಿ ಕೊಠಡಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ
ಉಪನೊಂದಾಣಾಧಿಕಾರಿಗಳ ಕಚೇರಿಯನ್ನು ಮೂರನೇ ಮಹಡಿಗೆ ಸ್ಥಳಾಂತರಿಸಿದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ತೀವ್ರ ತೊಂದರೆಯಾಗಲಿರುವ ವಿಚಾರವನ್ನು ತಹಶೀಲ್ದಾರ್ ರವರ ಗಮನಕ್ಕೆ ತಂದಾಗ ಅದಕ್ಕೆ ಸ್ಪಂದಿಸಿದ ತಹಶೀಲ್ದಾರ್‌ರವರು ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದರು.

ನಿಯೋಗದಲ್ಲಿ ವಕೀಲರ ಸಂಘದ ಅದ್ಯಕ್ಷ ಸೇವಿಯರ್ ಪಾಲೇಲಿ, ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್,ಎ, ಉಪಾದ್ಯಕ್ಷ ಶ್ರೀನಿವಾಸ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಶೈಲೇಶ್ ಆರ್ ಠೋಸರ್, ಸದಸ್ಯರುಗಳಾದ ಬಿ.ಕೆ ಉದಯಕುಮಾರ್ ಮತ್ತು ಹರ್ಷಿತ್ ರವರುಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.