ಬೆಳ್ತಂಗಡಿ : ಸಿ.ಎ ಬ್ಯಾಂಕ್ ಮಹಾಸಭೆ

ಬೆಳ್ತಂಗಡಿ : ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಬಿ. ಮುನಿರಾಜ ಅಜ್ರಿಯವರ ಅಧ್ಯಕ್ಷತೆಯಲ್ಲಿ ಇಂದು (ಸೆ.6) ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್  ಇದರ ಸಭಾಂಗಣದಲ್ಲಿ ಜರುಗಿತು.
ಸಂಘವು ಸದ್ರಿ ವರ್ಷದಲ್ಲಿ 15.77 ಕೋಟಿ ಠೇವಣಿ ಸಂಗ್ರಹಿಸಿ ಸುಮಾರು 13.24 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದೆ. ಸಂಘವು ಸತತ 7 ವರ್ಷಗಳಲ್ಲಿ ಎ ಶ್ರೇಣಿ ಹೊಂದಿರುತ್ತದೆ. ಅಲ್ಲದೇ ಸದ್ರಿ ಸಾಲಿನಲ್ಲಿ ಸಂಘವು ರೂ 33.68 ಲಕ್ಷ ಲಾಭ ಗಳಿಸಿರುತ್ತದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಭತ್ತದ ಬೆಳೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಜಿತ್ ಕುಮಾರ್ ಆರಿಗ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಚಂದ್ರಹಾಸ ಗೌಡ ಹಾಗೂ ದ್ವಿತೀಯ ಸ್ಥಾನ ಪಡೆದ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್.ಎಸ್ ಇವರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಅದೃಷ್ಟ ಚೀಟಿದಾರರಿಗೆ ಕೃಷಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಗುರುವಪ್ಪ ಪೂಜಾರಿ, ನಿರ್ದೇಶಕರುಗಳಾದ ಅಜಿತ್ ಕುಮಾರ್, ರಾಧಾ, ವಿಮಲ, ಬಾಬು, ಸುಬ್ರಹ್ಮಣ್ಯ ಭಟ್, ಗಿರಿಧರ, ವಲೇರಿಯನ್, ಗಣೇಶ್ ಭಂಡಾರಿ, ಸುಬ್ರಾಯ ಉಪಾಧ್ಯಾಯ, ನಾರಾಯಣ ನಾಯ್ಕ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್, ಸಿಬ್ಬಂದಿಗಳಾದ ಹೇಮಲತಾ, ವನಿತಾ, ಹರಿಣಿ ಪ್ರಭು, ರಾಮಚಂದ್ರ, ಆಶೋಕ್, ನಳಿನಿ, ಹರೀಶ್, ವಿನೋದ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.