ಲಯನ್ಸ್ ಕ್ಲಬ್‌ನಲ್ಲಿ ಶಿಕ್ಷಕರ ದಿನಾಚರಣೆ

ಬೆಳ್ತಂಗಡಿ: ಇಲ್ಲಿಯ ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸವಣಾಲು ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಲ| ಮಂಜುನಾಥ ಜಿ. ಇವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಶಿಕ್ಷಕ ದಿ| ರಾಮ.ಪಿ ಸಾಲ್ಯಾನ್ ರವರಿಗೆ ಧರಣೇಂದ್ರ ಕೆ ಜೈನ್ ರವರು ನುಡಿನಮನ ಸಲ್ಲಿಸಿದರು.
ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ರಾಜೀವ ಗೌಡ, ಪ್ರಾಂತೀಯ ಅಧ್ಯಕ್ಷ ರಾಜು ಶೆಟ್ಟಿ, ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷೆ ಮೇದಿನಿ ಡಿ.ಗೌಡ, ಪಂಚಾಕ್ಷರಪ್ಪ, ಅನಂತ ಕೃಷ್ಣ, ಲಕ್ಷ್ಮಣ ಪೂಜಾರಿ, ರಘುರಾಮ ಗಾಂಭೀರ, ಶ್ರೀನಾಥ್ ಕೆ.ಎಂ, ಎಂ.ಜಿ ಶೆಟ್ಟಿ, ವಿ.ಆರ್ ನಾಯಕ್, ಕೃಷ್ಣ ಆಚಾರ್, ಪಾಲಾಕ್ಷ ಸುವರ್ಣ, ದೇವಿಪ್ರಸಾದ್, ಎ.ಕೆ.ಶಿವನ್, ಸುರೇಂದ್ರ, ಜಗನ್ನಾಥ ಶೆಟ್ಟಿ, ವಸಂತ ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.